ಸಿದ್ದುಗೆ ಮುಖಭಂಗ: ನಲಪಾಡ್‌ಗೆ ಅಧ್ಯಕ್ಷ ಸ್ಥಾನ ಕೊಡಿಸುವಲ್ಲಿ ಡಿಕೆಶಿ ಯಶಸ್ವಿ

Jun 30, 2021, 10:34 AM IST

ಬೆಂಗಳೂರು (ಜೂ. 30): ಕೆಪಿಸಿಸಿ ಅಧ್ಯಕ್ಷಹಾಗೂ ಶಾಸಕಾಂಗ ಪಕ್ಷದ ನಾಯಕ ನಡುವಿನ ತಿಕ್ಕಾಟಕ್ಕೆ ಕಾರಣಗಳ ಪೈಕಿ ಒಂದಾಗಿದ್ದ ಯುವ ಕಾಂಗ್ರೆಸ್‌ ಅಧ್ಯಕ್ಷ ಪಟ್ಟಯಾರಿಗೆ ಎಂಬ ವಿಚಾರ ಸಂಧಾನದ ಮೂಲಕ ಬಹುತೇಕ ಬಗೆಹರಿದಿದೆ.

ದೆಹಲಿಯಿಂದ ಮಹತ್ವದ ವಿಡಿಯೋ ಬಿಡುಗಡೆ, ಸಾಹುಕಾರ್ ಹೊಸ ಬಾಂಬ್..!

ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ ಹಾಗೂ ಯುವ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೃಷ್ಣ ಅಲ್ವರ್‌ ಅವರು ಇಡೀ ದಿನ ನಡೆಸಿದ ಕಸರತ್ತಿನ ಫಲವಾಗಿ ಸಂಧಾನ ಸೂತ್ರವೊಂದು ಹೊರಬಿದ್ದಿದೆ. ಅದು- ಈ ವರ್ಷಾಂತ್ಯ ಅಂದರೆ ಡಿಸೆಂಬರ್‌ 31ರವರೆಗೂ ಹಾಲಿ ಅಧ್ಯಕ್ಷ ಪಟ್ಟಹೊಂದಿರುವ ರಕ್ಷಾ ರಾಮಯ್ಯ ಅವರೇ ಅಧ್ಯಕ್ಷರಾಗಿ ಮುಂದುವರೆಯುವುದು. ಅನಂತರ ಸಾರ್ವತ್ರಿಕ ಚುನಾವಣೆವರೆಗೂ ಮೊಹಮ್ಮದ್‌ ನಲಪಾಡ್‌ ಅವರು ಅಧ್ಯಕ್ಷರಾಗುವುದು. ರಕ್ಷಾ ರಾಮಯ್ಯ ಅಧ್ಯಕ್ಷರಾಗಿರುವ ಅವಧಿಯಲ್ಲಿ ಮೊಹಮ್ಮದ್‌ ನಲಪಾಡ್‌ ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಪದಾಧಿಕಾರಿಯಾಗಿರುತ್ತಾರೆ. ನಲಪಾಡ್‌ ಅಧ್ಯಕ್ಷರಾಗುವ ಅವಧಿಯಲ್ಲಿ ರಕ್ಷಾ ರಾಮಯ್ಯ ರಾಷ್ಟ್ರೀಯ ಪದಾಧಿಕಾರಿಯಾಗುತ್ತಾರೆ.