Basanagouda Patil Yatnal ಅವ್ರ ಕಾಲ್ ಹಿಡ್ಕೊಂಡು ರಾಜೀನಾಮೆ ಕೊಡ್ಬೇಡಿ ಅಂತಾ ಬೇಡ್ಕೋತಾರೆ!

Mar 13, 2022, 7:26 PM IST

ಬೆಂಗಳೂರು (ಮಾ.13): ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ(Five State Election) ಕಾಂಗ್ರೆಸ್ ಪಕ್ಷ (Congress Party) ದಯನೀಯ ಸೋಲು ಕಂಡ ಬೆನ್ನಲ್ಲೇ, ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್ ನಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗುವ ಸೂಚನೆಗಳು ಸಿಕ್ಕಿವೆ. ಅದರಂತೆ ಭಾನುವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (Congress Working Committee) ಸಭೆ ಕೂಡ ನಡೆದಿದ್ದು, ನಾಲ್ವರು ಪ್ರಮುಖ ನಾಯಕರು ಗೈರಾಗಿದ್ದರು.

ಇದರ ನಡುವೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ (Sonia Gandhi) ಹಾಗೂ ರಾಹುಲ್ ಗಾಂಧಿ (Rahul Gandhi) ಸೋಲಿನ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನುವ ವದಂತಿಗಳ ಬಗ್ಗೆ ಮಾತನಾಡಿದ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal), "ಅವರೇನೋ ರಾಜೀನಾಮೆ ಕೊಡೋಕೆ ಸಿದ್ಧ ಇದ್ದಾರೆ. ಆದರೆ, ಕಾಂಗ್ರೆಸ್ ನ ಇತರ ನಾಯಕರೆಲ್ಲ ಅವರ ಕಾಲಿಗೆ ಬಿದ್ದು, ನೀವೇ ಈ ಹುದ್ದೆಯಲ್ಲಿರಿ ಅಂತಾ ಬೇಡ್ಕೋತಾರೆ' ಎಂದು ಟೀಕೆ ಮಾಡಿದ್ದಾರೆ. ಒಟ್ಟಾರೆ ಈ ರಾಜೀನಾಮೆ ವಿಚಾರ ಅನ್ನೋದೇ ನಾಟಕ. ಸೋನಿಯಾ, ರಾಹುಲ್, ಪ್ರಿಯಾಂಕಾ ಇವರಲ್ಲಿ ಯಾರೂ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡೋದಿಲ್ಲ ಎಂದು ಹೇಳಿದ್ದಾರೆ.

Election Result ಕಾಂಗ್ರೆಸ್ ನಾಯಕತ್ವ ಬದಲಾವಣೆ ಇಲ್ಲ, ಸೋನಿಯಾ ರಾಹುಲ್ ಅತ್ಯುನ್ನತ ನಾಯಕರು ಎಂದ ಸಿದ್ದರಾಯ್ಯ!
ಗಾಂಧಿ ಕುಟುಂಬದವರು ನಮಗೆ ಸ್ಟಾರ್ ಪ್ರಚಾರಕರು. ಅವರು ಭಾಷಣ ಮಾಡಿದ್ರೆ ನಮಗೆ ವೋಟ್ ಬೀಳುತ್ತೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಯತ್ನಾಳ್ ಲೇವಡಿ ಮಾಡಿದರು.