- ಪ್ರಬಲ ಖಾತೆಗೆ ಪಟ್ಟು ಹಿಡಿದಿದ್ದ ಆನಂದ್ ಸಿಂಗ್
- ಇಂದು ಹೊಸಪೇಟೆ ಶಾಸಕರ ಕಚೇರಿ ಓಪನ್..!
- ಸಂಧಾನ ಸಕ್ಸಸ್ ಆಯ್ತಾ.?
ಬೆಂಗಳೂರು (ಆ. 13): ಖಾತೆ ಬದಲಿಸುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಖಡಕ್ ಆಗಿ ಹೇಳಿದ್ದರೂ, ಆನಂದ್ ಸಿಂಗ್ ಪ್ರಬಲ ಖಾತೆಗೆ ಪಟ್ಟು ಹಿಡಿದಿದ್ದರು. ದೆಹಲಿಗೆ ಭೇಟಿ ನೀಡಿ ಹೈ ಕಮಾಂಡ್ ಜೊತೆ ಚರ್ಚೆಗೂ ಸಿದ್ಧತೆ ನಡೆಸಿದ್ದರು. ಇದೀಗ ಅಚ್ಚರಿ ಬೆಳವಣಿಗೆ ಎಂಬಂತೆ, ಇಂದು ಆನಂದ್ ಸಿಂಗ್ ಹೊಸಪೆಟೆ ಕಚೇರಿ ತೆರೆದಿದೆ.
ಇನ್ನೊಂದು ಕಡೆ ಸಚಿವ ಸ್ಥಾನ ವಂಚಿತರು, ಅಸಮಾಧಾನಿತರ ಜೊತೆ ಚರ್ಚೆ ನಡೆಸಲು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಗಸ್ಟ್ 15 ರ ಬಳಿಕ ರಾಜ್ಯಕ್ಕೆ ಭೇಟಿ ನೀಡಲಿದ್ಧಾರೆ. ಬಳಿಕವಾದರೂ ಅಸಮಾಧಾನ ಶಮನವಾಗುತ್ತಾ ಕಾದು ನೋಡಬೇಕಿದೆ.