ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅಧೋಗತಿಗಿಳಿದಿದ್ಯಾ! ನಡುರಸ್ತೆಯಲ್ಲೇ ಕಾನೂನಿನ ಅಪಹಾಸ್ಯ!

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅಧೋಗತಿಗಿಳಿದಿದ್ಯಾ! ನಡುರಸ್ತೆಯಲ್ಲೇ ಕಾನೂನಿನ ಅಪಹಾಸ್ಯ!

Published : Feb 18, 2025, 01:03 PM ISTUpdated : Feb 18, 2025, 07:15 PM IST

ಭದ್ರಾವತಿಯ ಉಜ್ಜನಿಪುರ ಸರ್ಕಲ್‌ನಲ್ಲಿ ಫೆಬ್ರವರಿ 9 ರಂದು ಗ್ಯಾಂಗ್ ವಾರ್ ನಡೆದಿದ್ದು, ಅಕ್ರಮ ಓಸಿ ದಂಧೆಯ ಹಿನ್ನೆಲೆಯಲ್ಲಿ ಆನೆ ಪ್ರದೀಪ್ ಮತ್ತು ಹಳೆ ಬಟ್ಟೆ ಆಕಾಶ್ ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ಕಾನೂನು ಸುವ್ಯವಸ್ಥೆ ಕುಸಿತದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿತವಾಗಿದೆ ಎನ್ನುವುದಕ್ಕೆ ನೂರಾರು ಘಟನೆಗಳು ಸಾಕ್ಷಿ ಆಗುತ್ತಿವೆ. ಇದು ಗೃಹ ಸಚಿವ ಪರಮೇಶ್ವರ್, ಸಿಎಂ ಸಿದ್ದರಾಮಯ್ಯನವರು ನೋಡಲೇಬೇಕಾದ ಸ್ಟೋರಿ.

ರಿಪಬ್ಲಿಕ್ ಆಫ್ ಭದ್ರಾವತಿ ಇದಕ್ಕೀಗ ಜ್ವಲಂತ ಸಾಕ್ಷಿಯಾಗಿದೆ. ನಡು ರಸ್ತೆಯಲ್ಲೇ ಮಚ್ಚು, ಲಾಂಗು, ಭರ್ಜಿ, ದೊಣ್ಣೆ, ಜಳಪಿಸುತ್ತಿವೆ. ಹಾಡು ಹಗಲೇ ದೊಣ್ಣೆಯಿಂದ ಬಡಿದಾಡಿದರೂ, ಬಾಟಲಿ  ಎಸೆದರು, ಕಲ್ಲು ತೂರಾಡಿದರೂ ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ. ಪೊಲೀಸರು ಮಾತ್ರ ಕೈ ಕಟ್, ಬಾಯ್ ಮುಚ್ ಎನ್ನುವಂತೆ ಸುಮ್ಮನೆ ನಿಂತಿದ್ದಾರೆ. ಸಂವಿಧಾನದ ರಕ್ಷಣೆ ಮಾಡಬೇಕಿದ್ದ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಬೇಕಿದ್ದ ಪೊಲೀಸ್ ಇಲಾಖೆಗೆ ಮಾತ್ರ ಇಂತಹ ಘಟನೆಗಳು ಕಣ್ಣ ಮುಂದೆ ನಡೆದರೂ ಕಣ್ಣು ಕಾಣಲ್ಲ. ದೊಡ್ಡದಾಗಿ ಸದ್ದು ಮಾಡುತ್ತಿದ್ದರೂ ಕಿವಿ ಕೇಳಲ್ಲ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗೊಲ್ಲ. ಬಡಿದಾಟ ನಡೆದರೂ ಕಂಪ್ಲೇಂಟ್ ಆಗೋಲ್ಲ. ಪ್ರಭಾವಿ ನಾಯಕರಿಂದಲೇ ರಾಜಿ ಪಂಚಾಯಿತಿ ಮಾಡಲಾಗುತ್ತದೆ. ಕಣ್ಣಿದ್ದೂ ಕುರುಡರಾಗೋ ಪೊಲೀಸರಿಗೆ ಅಕ್ರಮ ದಂಧೆಕೊರರ ಮಂತ್ಲಿ ಮೇಲೆ ಮಾತ್ರ ಕಣ್ಣು . ಅಕ್ರಮ ದಂಧೆ ಕೋರರ ಅಟ್ಟಹಾಸಕ್ಕೆ ಕಡಿವಾಣವೇ ಇಲ್ಲ. ಪೊಲೀಸರು ಸುಮೋಟೋ ಕೇಸ್ ಕೂಡ ದಾಖಲು ಮಾಡೋಲ್ಲ.

ಹೌದು, ಭದ್ರಾವತಿಯಲ್ಲಿ ಗ್ಯಾಂಗ್ ವಾರ್ ನಡೆದಿದೆ. ಅಕ್ರಮ ಓಸಿ ದಂಧೆಯ ಹಿನ್ನೆಲೆಯಲ್ಲಿ ನಡೆದಿತ್ತು. ಭದ್ರಾವತಿಯ ಉಜ್ಜನಿಪುರ ಸರ್ಕಲ್ ನಲ್ಲಿ ಫೆಬ್ರವರಿ 9ರ ಭಾನುವಾರ ಸಂಜೆ 5:15ರಲ್ಲಿ ವೇಳೆಗೆ ಗ್ಯಾಂಗ್ ವಾರ್ ನಡೆದಿತ್ತು. ಗ್ಯಾಂಗ್ ವಾರ್  ಫೈಟ್‌ಗೆ ಸಿಸಿಟಿವಿಯಲ್ಲಿ ಸೆರೆ ಸಿಕ್ಕ ದೃಶ್ಯಗಳೇ ಸಾಕ್ಷಿ. ಆನೆ ಪ್ರದೀಪ್ ವರ್ಸಸ್ ಹಳೆ ಬಟ್ಟೆ ಆಕಾಶ್ ಗ್ಯಾಂಗ್  ನಡುವೆ ಮಾರಾಮಾರಿ ನಡೆದಿದೆ. ಲ್ಕಾರು ಬೈಕಿನಲ್ಲಿ ಮಚ್ಚು, ದೊಣ್ಣೆ, ಬರ್ಚಿ ಹಿಡಿದು ಬಂದ ಹಳೆ ಬಟ್ಟೆ ಆಕಾಶ್ ಗ್ಯಾಂಗ್, ಸರ್ಕಲ್ ಬಳಿ ನಿಂತಿದ್ದ ಆನೆ ಪ್ರದಿಪ್‌ಗೆ ಹೊಡೆದಿದ್ದಾರೆ. ಆನೆ ಪ್ರದಿಯ ಮೇಲಿನ ಅಟ್ಯಾಕ್ ತಪ್ಪಿಸಲು ಹೋದ ಜಪಾನ್‌ಗೆ ತಲೆಬುರುಡೆ ಒಡೆದು ರಕ್ತ ಚಿಮ್ಮಿತ್ತು. ಬಹಳ ಹೊತ್ತು ಉಜ್ಜನಿಪುರ ಸರ್ಕಲ್ ಬಳಿ ನಡೆದಿತ್ತು ಮಚ್ಚು ಲಾಂಗು ದೊಣ್ಣೆ ಹಿಡಿದು ಕೂಗಾಟ ಕಿರುಚಾಟ. ಹಳೆ ಬಟ್ಟೆ ರಾಕೇಶ್ ಗ್ಯಾಂಗ್ ನವರು ಬಾಟಲಿ ಎಸೆದರೆ ಆನೆ ಪ್ರದಿ, ಗ್ಯಾಂಗ್ ನವರು  ಕಲ್ಲು ತೂರಾಟ  ನಡೆಸಿದ್ದರು. 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more