ಇನ್ಮುಂದೆ ಸಿಕ್ಕ ಸಿಕ್ಕವರಿಗೆ ಕೋವಿಡ್ ಟೆಸ್ಟ್ (Covid Test) ಮಾಡುವಂತಿಲ್ಲ. ಯಾರಿಗೆ ಅಗತ್ಯವಿದೆಯೋ ಅವರಿಗೆ ಟೆಸ್ಟ್ ಮಾಡಿ ಎಂದು ತಾಂತ್ರಿಕ ಸಮಿತಿ ಕೋವಿಡ್ ನಿಯಮವನ್ನು ಪರಿಷ್ಕರಿಸಿದೆ.
ಬೆಂಗಳೂರು (ಜ. 28): ಇನ್ಮುಂದೆ ಸಿಕ್ಕ ಸಿಕ್ಕವರಿಗೆ ಕೋವಿಡ್ ಟೆಸ್ಟ್ (Covid Test) ಮಾಡುವಂತಿಲ್ಲ. ಯಾರಿಗೆ ಅಗತ್ಯವಿದೆಯೋ ಅವರಿಗೆ ಟೆಸ್ಟ್ ಮಾಡಿ ಎಂದು ತಾಂತ್ರಿಕ ಸಮಿತಿ ಕೋವಿಡ್ ನಿಯಮವನ್ನು ಪರಿಷ್ಕರಿಸಿದೆ.
ಯಾರಿಗೆಲ್ಲಾ ಕೋವಿಡ್ ಟೆಸ್ಟ್ ಅಗತ್ಯವಿದೆಯೋ ಅವರಿಗೆ ಟೆಸ್ಟ್ ಮಾಡಿ. ಸೂಕ್ತ ಚಿಕಿತ್ಸೆ ಕೊಡಿ. ಶಸ್ತ್ರ ಚಿಕಿತ್ಸೆ, ಹೆರಿಗೆ ವೇಳೆ ತುರ್ತು ಸ್ಥಿತಿ ಇದ್ದರೆ ಟೆಸ್ಟ್ ಬೇಕಿಲ್ಲ. ವಿದೇಶದಿಂದ ಬಂದವರಿಗೆ ಕಡ್ಡಾಯವಾಗಿ ಟೆಸ್ಟ್ ಮಾಡಬೇಕು ಎಂದು ಮಾರ್ಗಸೂಚಿ ಪರಿಷ್ಕರಣೆ ಮಾಡಲಾಗಿದೆ.