Feb 2, 2022, 1:43 PM IST
ಬೆಂಗಳೂರು (ಫೆ. 02): ನಾಳೆ (Feb 03) ಸಿಎಂ ಬೊಮ್ಮಾಯಿ CM Bommai)ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ವರಿಷ್ಠರ ಜೊತೆ ಸಂಪುಟ ಪುನಾರಚನೆ ಬಗ್ಗೆ ಚರ್ಚಿಸಲಿದ್ದಾರೆ. ಕೊನೆಯ ಅವಕಾಶ ಬಳಸಿಕೊಳ್ಳಲು, ದೆಹಲಿಗೆ ತೆರಳಲು ಶಾಸಕರು ಸಿದ್ಧತೆ ನಡೆಸುತ್ತಿದ್ದಾರೆ.
ಆದಷ್ಟು ಬೇಗ ಸಂಪುಟ ಪುನಾರಚಿಸಿ, ಇಲ್ಲವಾದರೆ ಮಂತ್ರಿ ಸ್ಥಾನವೇ ಬೇಡ' ಎಂದು ಸಚಿವಾಕಾಂಕ್ಷಿಗಳು ದಿನ ಬೆಳಗಾದರೆ ಸಿಎಂ ನಿವಾಸಕ್ಕೆ ಪರೇಡ್ ನಡೆಸುತ್ತಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಸಿಎಂ ದೆಹಲಿಗೆ ಹಾರಲಿದ್ದಾರೆ.