ಜುಲೈ 8ರಂದು ಮೆಗಾ ಲೋಕ್‌ ಅದಾಲತ್‌: 20 ಲಕ್ಷ ಕೇಸ್‌ ಇತ್ಯರ್ಥ ಗುರಿ

Jul 6, 2023, 10:13 PM IST

ಬೆಂಗಳೂರು (ಜು.06): ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದಿಂದ ಜುಲೈ 8ರಂದು ರಾಜ್ಯದ ಹೈಕೋರ್ಟ್, ಎಲ್ಲಾ ಜಿಲ್ಲಾ ನ್ಯಾಯಾಲಯಗಳು ಹಾಗೂ ತಾಲ್ಲೂಕು ನ್ಯಾಯಾಲಯಗಳಲ್ಲಿ ಮೆಗಾ ಲೋಕ್‌ ಅದಾಲತ್‌ ಆಯೋಜನೆ ಮಾಡಲಾಗುತ್ತಿದೆ. ಸುಮಾರು 20 ಲಕ್ಷಕ್ಕೂ ಅಧಿಕ ನ್ಯಾಯಿಕ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಗುರಿಯನ್ನು ಹೊಂದಲಾಗಿದೆ.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ನ್ಯಾಯಮೂರ್ತಿ ಜಿ. ನರೇಂದರ್‌ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕ ಅದಾಲತ್‌ ಆಯೋಜಿಸಿ ಮಿಡಿಯೇಷನ್ ಮೂಲಕ ಪ್ರಕರಣಗಳ ಇತ್ಯರ್ಥ ಮಾಡಲಾಗುವುದು. ವಿವಿಧ ರೀತಿಯ ಕೇಸ್ ಗಳ ಇತ್ಯರ್ಥಕ್ಕೆ ಲೋಕ ಅದಾಲತ್‌ ಸೂಕ್ತ ವೇದಿಕೆಯಾಗಲಿದೆ. ಅಪಘಾತ, ಚೆಕ್ ಬೌನ್ಸ್, ಮನಿ ರಿಕವರಿ ಕೇಸ್ ಸೇರಿದ ವಿವಿಧ ಪ್ರಕರಣಗಳ ಇತ್ಯರ್ಥ ಮಾಡಲಾಗುತ್ತದೆ. ಇನ್ನು ಪ್ರಕರಣದ ಕಕ್ಷಿದಾರರು ಇದರ ಲಾಭ ಪಡೆದುಕೊಳ್ಳಬಹುದು.

ಇನ್ನು ಜುಲೈ 8ರ ಶನಿವಾರ ಬೆಳಗ್ಗೆ 10:30 ಕ್ಕೆ ರಾಜ್ಯಾದ್ಯಂತ ಲೋಕ್ ಆದಾಲತ್ ಆರಂಭವಾಗಲಿದೆ. ಈ ವೇಳೆ ತುಂಬಾ ವರ್ಷಗಳಿಂದ ಉಳಿದಿರುವ ಪ್ರಕರಣಗಳ ಸೆಟ್ಲ್ಮೆಂಟ್ ಮಾಡಲಿದೆ. ಫ್ಯಾಮಿಲಿ ಕೇಸ್, ಪ್ರಾಪರ್ಟಿ ಕೇಸ್, ಟ್ರಾಫಿಕ್ ಕೇಸ್, ಚೆಕ್ ಬೌನ್ಸ್ ಕೇಸ್ ಸೇರಿ ರಾಜ್ಯಾದ್ಯಂತ ಸುಮಾರು 20 ಲಕ್ಷ ಪ್ರಕರಣಗಳ ಇತ್ಯರ್ಥಗೊಳ್ಳುವ ಸಾಧ್ಯತೆಯಿದೆ ಎಂದು ನ್ಯಾಯಮೂರ್ತಿ ಜಿ. ನರೇಂದರ್‌ ಹೇಳಿದರು.