- 11 ಜಿಲ್ಲೆ ಲಾಕ್ ವಿಸ್ತರಣೆ, 19 ಜಿಲ್ಲೆ ಮಿನಿ ಅನ್‌ಲಾಕ್
- ಅನ್‌ಲಾಕ್ ಆದ ಕಡೆ ಜೂ. 21 ರವರೆಗೆ ರಾತ್ರಿ ಕರ್ಫ್ಯೂ
- ಅಂತಾರಾಜ್ಯ, ಅಂತರ್ ಜಿಲ್ಲಾ ಸಂಚಾರ ಓಕೆ
ಬೆಂಗಳೂರು (ಜೂ. 11): ಸೆಮಿನ ನಿರ್ಬಂಧಗಳನ್ನು ಹಂತ ಹಂತವಾಗಿ ಸಡಿಲಗೊಳಿಸಲು ತೀರ್ಮಾನಿಸಿರುವ ರಾಜ್ಯ ಸರ್ಕಾರವು ಬರುವ ಸೋಮವಾರದಿಂದ ಜಾರಿಗೆ ಬರುವಂತೆ ಪಾಸಿಟಿವಿಟಿ ದರ ಕಡಿಮೆಯಿರುವ 19 ಜಿಲ್ಲೆಗಳಲ್ಲಿ ಕೆಲವು ಸಡಿಲಿಕೆಗಳನ್ನು ಮಾಡಿದೆ. 11 ಜಿಲ್ಲೆಗಳಲ್ಲಿ ಲಾಕ್‌ಡೌನ್ ವಿಸ್ತರಣೆ ಮಾಡಿದೆ. ಪಾಸಿಟಿವಿಟಿ ದರ ಶೇ. 13 ಇರುವ ಜಿಲ್ಲೆ ಅನ್‌ಲಾಕ್, ಶೇ. 09 ರಷ್ಟು ಇರುವ ಜಿಲ್ಲೆ ಲಾಕ್ ಮಾಡಿದೆ. ಲಾಜಿಕ್ ಇಲ್ಲದೇ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ.