ಕೊರೋನಾ ವೈರಸ್ ಟೆಸ್ಟ್‌ನಲ್ಲಿ ಕರ್ನಾಟಕ ಹಿಂದೆ..!

1, Jul 2020, 5:03 PM

ಬೆಂಗಳೂರು(ಜು.01): ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದೀಗ ಅಕ್ಕಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ಕೊರೋನಾ ಪರೀಕ್ಷೆಯಲ್ಲಿ ಕರ್ನಾಟಕ ಹಿಂದೆ ಬಿದ್ದಿರುವ ಆಘಾತಕಾರಿ ಅಂಶ ಹೊರಬಿದ್ದಿದೆ.

ನೆರೆಯ ಆಂಧ್ರಪ್ರದೇಶ, ತಮಿಳುನಾಡಿಗಿಂತ ಕರ್ನಾಟಕ ಕೊರೋನಾ ಟೆಸ್ಟ್ ಟೆಸ್ಟ್ ವಿಚಾರದಲ್ಲಿ ಹಿಂದೆ ಬಿದ್ದಿದೆ. ಪ್ರತಿ 10 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ಯಾವ ರಾಜ್ಯ ಎಷ್ಟು ಟೆಸ್ಟ್ ಮಾಡಿದೆ ಎನ್ನುವ ಅಂಕಿ ಅಂಶ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.

ಪೊಲೀಸ್ ಅಧಿಕಾರಿಗಳ ಜೊತೆ ಗೃಹ ಸಚಿವರ ಸಭೆ; ಲಾಕ್‌ಡೌನ್ ಬಗ್ಗೆ ಚರ್ಚೆ?

ಕರ್ನಾಟಕ ಸರ್ಕಾರ 10 ಲಕ್ಷ ಜನಸಂಖ್ಯೆಗೆ ಕೇವಲ 9741 ಕೋವಿಡ್ ಟೆಸ್ಟ್‌ಗಳನ್ನು ಮಾಡಿದೆ. ಆದರೆ ಕೋವಿಡ್ ಟೆಸ್ಟ್ ಮಾಡುವ ವಿಚಾರದಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಡೆಲ್ಲಿ ಸರ್ಕಾರ ಮುಂದಿದೆ. ಡೆಲ್ಲಿಯಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ 29,750 ಟೆಸ್ಟ್ ಮಾಡಲಾಗಿದೆ. ಬೇರೆ ಬೇರೆ ರಾಜ್ಯಗಳು ಎಷ್ಟೆಷ್ಟು ಟೆಸ್ಟ್ ಮಾಡಿವೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..