ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ನಿಯಂತ್ರಣಕ್ಕೆ ಬರದೇ ಇರುವ ಹಿನ್ನೆಲೆಯಲ್ಲಿ ಹಾಲಿ ಇರುವ ಜನತಾ ಕರ್ಫೂ ಮಾರ್ಗಸೂಚಿಯಲ್ಲಿ ಸಣ್ಣ ಪುಟ್ಟಬದಲಾವಣೆ ಮಾಡಿ ಮೇ 10ರಿಂದ 24ರ ಬೆಳಗ್ಗೆವರೆಗೆ ಎರಡು ವಾರಗಳ ಸೆಮಿ ಲಾಕ್‌ಡೌನ್ ವಿಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು (ಮೇ. 08): ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ನಿಯಂತ್ರಣಕ್ಕೆ ಬರದೇ ಇರುವ ಹಿನ್ನೆಲೆಯಲ್ಲಿ ಹಾಲಿ ಇರುವ ಜನತಾ ಕರ್ಫೂ ಮಾರ್ಗಸೂಚಿಯಲ್ಲಿ ಸಣ್ಣ ಪುಟ್ಟಬದಲಾವಣೆ ಮಾಡಿ ಮೇ 10ರಿಂದ 24ರ ಬೆಳಗ್ಗೆವರೆಗೆ ಎರಡು ವಾರಗಳ ಸೆಮಿ ಲಾಕ್‌ಡೌನ್ ವಿಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಜನತಾ ಕರ್ಫ್ಯೂನಲ್ಲಿ ಗಾರ್ಮೆಂಟ್ಸ್‌ಗೆ ನೀಡಿದ್ದ ಸಡಿಲಿಕೆಯನ್ನು ಈಗ ಹಿಂಪಡೆದುಕೊಳ್ಳಲಾಗಿದೆ. ದಿನದ 24 ಗಂಟೆಯೂ ಉತ್ಪಾದನೆ ಮಾಡುವ ವಲಯವನ್ನು ಹೊರತುಪಡಿಸಿ ಇನ್ನಿತರ ಕೈಗಾರಿಕೆಗಳು ಬಂದ್ ಆಗಲಿವೆ. ಅಲ್ಲದೇ, ಖಾಸಗಿ ಕಂಪನಿಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಎಂದು ಸೂಚಿಸಲಾಗಿದೆ.