ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman)ಇಂದು 2022-23 ನೇ ಸಾಲಿನ ಆಯವ್ಯಯ ಪತ್ರವನ್ನು ಮಂಡಿಸಿದರು. ಈ ಬಜೆಟನ್ನು ಆಡಳಿತಾರೂಢ ಬಿಜೆಪಿ ಸ್ವಾಗತಿಸಿದರೆ, ವಿಪಕ್ಷಗಳು ನೀರಸ ಬಜೆಟ್, ಶೂನ್ಯ ಬಜೆಟ್ ಎಂದು ವಾಗ್ದಾಳಿ ನಡೆಸಿವೆ.
ಬೆಂಗಳೂರು (ಫೆ. 01): ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman)ಇಂದು 2022-23 ನೇ ಸಾಲಿನ ಆಯವ್ಯಯ ಪತ್ರವನ್ನು ಮಂಡಿಸಿದರು. ಈ ಬಜೆಟನ್ನು ಆಡಳಿತಾರೂಢ ಬಿಜೆಪಿ ಸ್ವಾಗತಿಸಿದರೆ, ವಿಪಕ್ಷಗಳು ನೀರಸ ಬಜೆಟ್, ಶೂನ್ಯ ಬಜೆಟ್ ಎಂದು ವಾಗ್ದಾಳಿ ನಡೆಸಿವೆ. ಇನ್ನು ರಾಜ್ಯ ರಾಜಕೀಯದಲ್ಲಿ ಏನೆಲ್ಲಾ ಅಪ್‌ಡೇಟ್ಸ್‌ಗಳಿವೆ.? ಏನೆಲ್ಲಾ ಹೊಸ ವಿಚಾರಗಳಿವೆ ಎಂದು ನೋಡುವುದಾದರೆ, 2022-23ನೇ ಸಾಲಿನ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಗಾಗಿ ಭಾರತ ಸರ್ಕಾರ, 12-13ನೇ ಶತಮಾನದಲ್ಲಿ ಹೊಯ್ಸಳ ರಾಜವಂಶಸ್ಥರಿಂದ ನಿರ್ಮಾಣವಾದ ಕರ್ನಾಟಕದ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ ದೇವಸ್ಥಾನಗಳನ್ನು ನಾಮನಿರ್ದೇಶನಗೊಳಿಸಿದೆ.
ದೇಶದಲ್ಲಿ ಕೊರೋನಾ ವೈರಸ್ಸಿನ 3ನೇ ಅಲೆ ಇನ್ನೂ ಅಂತ್ಯವಾಗದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಪಾದಯಾತ್ರೆಗಳು, ವಾಹನಗಳ ರಾರಯಲಿಗಳು ಸೇರಿದಂತೆ ಇನ್ನಿತರ ಮೆರವಣಿಗೆಗಳ ಮೇಲಿನ ನಿಷೇಧವನ್ನು ಫೆ.11 ರವರೆಗೆ ವಿಸ್ತರಣೆ ಮಾಡಿದೆ.