Jun 28, 2021, 9:29 AM IST
ಬೆಂಗಳೂರು (ಜೂ. 28): ದೇಶದಲ್ಲಿ ಆರ್ಭಟ ಜೋರಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್ ಆತಂಕ ವ್ಯಕ್ತಪಡಿಸಿದ್ದಾರೆ. 'ಡೆಲ್ಟಾ ಪ್ಲಸ್ ಶ್ವಾಸಕೋಶಕ್ಕೆ ಹಾನಿ ಮಾಡುವ ಡೆಡ್ಲಿ ಮ್ಯೂಟೆಂಟ್. ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಜಾಗೃತವಾಗಿರಲು ಈಗಾಗಲೇ ಕೇಂದ್ರದಿಂದ ಸೂಚನೆ ಕೂಡಾ ಬಂದಿದೆ. ರಾಜ್ಯದ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗುವುದು. ಅಂತರ್ ರಾಜ್ಯದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗುವುದು. ರಾಜ್ಯಕ್ಕೆ ಎಂಟ್ರಿಯಾಗುವಾಗ ನೆಗೆಟಿವ್ ರಿಪೋರ್ಟ್ ಕಡ್ಡಾಯ. ಈಗ 500 ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ. ವರದಿಗಾಗಿ ಕಾಯುತ್ತಿದ್ದೇವೆ' ಎಂದು ಡಾ. ಸುಧಾಕರ್ ಹೇಳಿದ್ದಾರೆ.
ಡೆಲ್ಟಾ ಪ್ಲಸ್ ಸೋಂಕಿನ ತೀವ್ರತೆ ಹೆಚ್ಚು ಎಂಬುವುದಕ್ಕೆ ಸಾಕ್ಷ್ಯವಿಲ್ಲ!