Jan 14, 2020, 3:03 PM IST
ಬೆಂಗಳೂರು[ಜ.14]: ಸಂಕ್ರಾಂತಿ ಹಬ್ಬಕ್ಕೂ ಮುನ್ನ ಬಿಪಿಎಲ್ ಕುಟುಂಬ ಸದಸ್ಯರಿಗೆ ಸರ್ಕಾರ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಕತ್ತರಿ ಹಾಕುವ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇದರಿಂದ ಸರ್ಕಾರ ಬೊಕ್ಕಸಕ್ಕೆ ಉಳಿತಾಯ ಮಾಡಲು ಸಜ್ಜಾಗಿದೆ. ಅಷ್ಟಕ್ಕೂ ಆ ಯೋಜನೆ ಯಾವುದು? ಇಲ್ಲಿದೆ ವಿವರ
'56 ಇಂಚಿನ ಮೋದಿಗೆ ಮಾತೃ ಹೃದಯ ಇಲ್ಲ, ಕೈ ಅಧಿಕಾರಕ್ಕೆ ಬಂದ್ರೆ 10ಕೇಜಿ ಅಕ್ಕಿ'
ಸರ್ಕಾರ ಸದ್ಯ ನ್ನ ಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬ ಸದಸ್ಯರಿಗೆ ವಿತರಿಸುತ್ತಿರುವ ಅಕ್ಕಿ ಪ್ರಮಾಣವನ್ನು ಇಳಿಸಲು ನಿರ್ಧರಿಸಿದೆ. ಈ ಸಂಬಂಧ ಆಹಾರ ಇಲಾಖೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದು, 7 ಕೆಜಿ ಅಕ್ಕಿ ಬದಲು 5 ಕೆಜಿ ಅಕ್ಕಿ ಹಾಗೂ 1 ಕೆಜಿ ತೊಗರಿ ಬೇಳೆ ನೀಡಲು ತಿಳಿಸಿದೆ.
ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್‌ಗೆ ಹಣ ನಿಲ್ಲಿಸಬೇಡಿ: ಸಿದ್ದರಾಮಯ್ಯ ಮನವಿ
2 ಕೆಜಿ ಅಕ್ಕಿ ಇಳಿಸಿದರೆ, ವಾರ್ಷಿಕ 2000 ಕೋಟಿ ರೂ. ಉಳಿತಾಯವಾಗಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ಲಾಭವಾಗಲಿದೆ. 8 ಜಿಲ್ಲೆಗಳ ಆಹಾರ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಈ ಬಗ್ಗೆ ಚರ್ಚೆ ಮಾಡಲಾಗಿದೆ.