Sep 22, 2020, 11:27 AM IST
ಬೆಂಗಳೂರು (ಸೆ. 22): ಕೃಷ್ಣಾನಗರಿ ಉಡುಪಿ 38 ವರ್ಷಗಳ ಇತಿಹಾಸದಲ್ಲಿಯೇ ಕಂಡು ಕೇಳರಿದಷ್ಟು ದಾಖಲೆ ಮಳೆಗೆ ಸಾಕ್ಷಿಯಾಗಿದೆ. ಸತತ ಮೂರು ದಿನಗಳು ಸುರಿದ ಧಾರಾಕಾರ ಮಳೆಗೆ ಜನರು ಹೈರಾಣಾಗಿ ಹೋಗಿದ್ದಾರೆ. ಇದು ಉಡುಪಿಯ ಕಥೆ ಮಾತ್ರವಲ್ಲ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದೇ ಚಿತ್ರಣ.
ಬೆಳಗಾವಿಯಲ್ಲಿ ಭಾರಿ ಮಳೆ; ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರನ ರಕ್ಷಣೆ
ಶಿವಮೊಗ್ಗ, ಚಿಕ್ಕಮಗಳೂರು, ಕಲ್ಬುರ್ಗಿ, ಯಾದಗಿದಿ, ಬೆಳಗಾವಿ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಕುಂಭದ್ರೋಣ ಮಳೆಯಾಗಿದೆ. ನದಿಗಳು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲವು ಕಡೆ ಪ್ರವಾಹದಿಂದ ಜನ, ಜಾನುವಾರುಗಳು ಕೊಚ್ಚಿ ಹೋಗಿರುವ ಉದಾಹರಣೆಗಳು ಇವೆ. ಹಾಗಾದರೆ ರಾಜ್ಯಾದ್ಯಂತ ಎಲ್ಲೆಲ್ಲಿ ಏನೇನು ಅನಾಹುತಗಳಾಗಿವೆ? ಈಗ ಹೇಗಿದೆ ಸ್ಥಿತಿ? ನೋಡೋಣ ಬನ್ನಿ..!