ಕೊರೊನಾ ಸೋಂಕು (CoronaVirus) ನಿಯಂತ್ರಣಕ್ಕೆ ಈಗಿರುವ ಟಫ್‌ರೂಲ್ಸ್‌ಗಳನ್ನು ಮುಂದುವರೆಸಬೇಕಾ..? ತೆರವುಗೊಳಿಸಬೇಕಾ.? ಎಂಬ ನಿರ್ಧಾರ ಮಾಡದ ಸ್ಥಿತಿಯಲ್ಲಿದೆ ಸರ್ಕಾರ. ಇದೇ ಶುಕ್ರವಾರ (ಜ. 21) ರಂದು ಮಹತ್ವದ ಸಭೆ ಕರೆಯಲಾಗಿದ್ದು, ಅಂದು ನಿರ್ಧಾರವಾಗುವ ಸಾಧ್ಯತೆ ಇದೆ.
ಬೆಂಗಳೂರು (ಜ. 19): ಕೊರೊನಾ ಸೋಂಕು (CoronaVirus) ನಿಯಂತ್ರಣಕ್ಕೆ ಈಗಿರುವ ಟಫ್‌ರೂಲ್ಸ್‌ಗಳನ್ನು ಮುಂದುವರೆಸಬೇಕಾ..? ತೆರವುಗೊಳಿಸಬೇಕಾ.? ಎಂಬ ನಿರ್ಧಾರ ಮಾಡದ ಸ್ಥಿತಿಯಲ್ಲಿದೆ ಸರ್ಕಾರ. ಇದೇ ಶುಕ್ರವಾರ (ಜ. 21) ರಂದು ಮಹತ್ವದ ಸಭೆ ಕರೆಯಲಾಗಿದ್ದು, ಅಂದು ನಿರ್ಧಾರವಾಗುವ ಸಾಧ್ಯತೆ ಇದೆ.
ವೀಕೆಂಡ್ ಕರ್ಫ್ಯೂಗೆ ಸಾರ್ವಜನಿಕ ವಲಯದಲ್ಲೂ ಭಾರೀ ವಿರೋಧ ವ್ಯಕ್ತವಾಗಿದೆ. ಕರ್ಫ್ಯೂಗೆ ಸಹಕರಿಸುವುದಿಲ್ಲ ಎಂದು ಹೊಟೇಲ್, ಬಾರ್ ಮಾಲಿಕರು ಆಕ್ಷೇಪ ಎತ್ತಿದ್ದಾರೆ. ಇನ್ನೊಂದು ಕಡೆ ಬಿಜೆಪಿ ನಾಯಕರೇ ನಿಯಮವನ್ನು ಪಾಲಿಸುತ್ತಿಲ್ಲ. ಹೀಗಾಗಿ ಸರ್ಕಾರಕ್ಕೆ ಭಾರೀ ಮುಜುಗರವಾಗಿದೆ.