Mekedatu Padayatre: 27 ರಿಂದ ಮೇಕೆದಾಟು ಪಾದಯಾತ್ರೆ ಪುನಾರಂಭ

Feb 25, 2022, 5:14 PM IST

ಬೆಂಗಳೂರು (ಫೆ. 25): ಕೋವಿಡ್‌ ಹಿನ್ನೆಲೆಯಲ್ಲಿ ಅರ್ಧದಲ್ಲೇ ಮೊಟಕುಗೊಂಡಿದ್ದ ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್‌ ಮತ್ತೆ ಚಾಲನೆ ನೀಡಲು ಮುಂದಾಗಿದೆ. ಫೆ.27ರಂದು ರಾಮನಗರದಿಂದ 2ನೇ ಹಂತದ ಪಾದಯಾತ್ರೆ ಆರಂಭ​ವಾ​ಗ​ಲಿದೆ ಎಂದು ದೆಹಲಿಯಲ್ಲಿ ಡಿಕೆ ಶಿವಕುಮಾರ್ ಹೇಳಿದ್ದಾರೆ. 

UP Elections: ಅಖಿಲೇಶ್- ಮಯಾಂಕ್ ಜೋಶಿ ಭೇಟಿ, ಬಿಜೆಪಿಗೆ ಕಾದಿದೆಯಾ ಶಾಕ್..?

27 ರಂದು ಬೆಳಗ್ಗೆ 9 ಗಂಟೆಗೆ 2ನೇ ಹಂತದ ಪಾದಯಾತ್ರೆ ರಾಮನಗರದಿಂದಲೇ ಆರಂಭವಾಗಲಿದೆ. ಈ ವೇಳೆ ವಿಧಾನಸಭಾ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸೇರಿ ರಾಜ್ಯದ ಅನೇಕ ಹಿರಿಯ ಕಾಂಗ್ರೆಸ್‌ ನಾಯಕರು ಭಾಗವಹಿಸಲಿದ್ದಾರೆ. ಈ ಮೊದಲು ಬೆಂಗಳೂರಿನಲ್ಲೇ ಐದು ದಿನ ಪಾದಯಾತ್ರೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಈಗ ಬಜೆಟ್‌ ಇರುವ ಕಾರಣ ಮೂರು ದಿನ ಮಾತ್ರ ಬೆಂಗಳೂರಿನಲ್ಲಿ ಮಾಡುತ್ತೇವೆ. ಒಟ್ಟು 5 ದಿನ ಪಾದಯಾತ್ರೆ ನಡೆಯಲಿದ್ದು, ಕೆಲ ಮಾರ್ಗ ಬದಲಾವಣೆ ಮಾಡಲಾಗಿದೆ.

ನಮ್ಮ ನೀರು-ನಮ್ಮ ಹಕ್ಕು ಘೋಷವಾಕ್ಯದೊಂದಿಗೆ ಕಾವೇರಿ ಮತ್ತು ಅರ್ಕಾವತಿ ನದಿಗಳು ಸೇರುವ ಸಂಗಮದಿಂದ ಜ.9ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಮೇಕೆದಾಟು ಪಾದಯಾತ್ರೆ ಆರಂಭಿಸಲಾಗಿತ್ತು. ಕೋವಿಡ್‌ ಹಿನ್ನೆಲೆಯಲ್ಲಿ ಈ ಪಾದಯಾತ್ರೆಯನ್ನು ಜ.13ರಂದು ತಾತ್ಕಾಲಿಕವಾಗಿ ಮೊಟಕುಗೊಳಿಸಲಾಗಿತ್ತು.