Feb 12, 2022, 5:27 PM IST
ಬೆಂಗಳೂರು (ಫೆ. 11): ಹಿಜಾಬ್ ವಿವಾದ (Hijab Row) ಬೇರೆ ಬೇರೆ ಸ್ವರೂಪ ಪಡೆಯುತ್ತಿದೆ. ಇದಕ್ಕೆ ರಾಜಕೀಯ ಬಣ್ಣವೂ ಮೆತ್ತಿಕೊಂಡಿದೆ. ಹಿಜಾಬ್‌ಗೆ ಬೆಂಬಲಿಸಬೇಕೋ, ವಿರೋಧಿಸಬೇಕೋ ಎಂಬ ಗೊಂದಲ ಕಾಂಗ್ರೆಸ್‌ನಲ್ಲಿದೆ. ಹಿಜಾಬ್ ಬಗ್ಗೆ ಮೌನವಾಗಿರುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸೂಚನೆ ನೀಡಿದ್ದಾರೆ. ಅಲ್ಪಸಂಖ್ಯಾತರ ಪರ ವಾದಿಸುವಂತೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
Hijab Row: 6 ವಿದ್ಯಾರ್ಥಿನಿಯರಿಗೆ ಜೆಎನ್‌ಯುವರೆಗೂ ಸಂಪರ್ಕ, CFI ನಂಟು, ಏನಿದು ಷಡ್ಯಂತ್ರ.?
ಸಾಫ್ಟ್ ಹಿಂದುತ್ವ ಧೋರಣೆ ತಾಳಿದರೆ ಚುನಾವಣೆಯಲ್ಲಿ ಅನುಕೂಲವಾಗುತ್ತದೆ. ಮುಸ್ಲಿಂ ಓಲೈಕೆ ಪಕ್ಷ ಎಂಬ ಹಣೆಪಟ್ಟಿ ದೂರವಾಗುತ್ತದೆ. ಹಿಜಾಬ್‌ನಿಂದ ದೂರ ಉಳಿದರೆ ಹಿಂದೂ ಯುವಕರ ಮತಗಳನ್ನು ಸೆಳೆಯಬಹುದು ಎಂಬುದು ಡಿಕೆಶಿ ಲೆಕ್ಕಾಚಾರ. ಹಿಜಾಬ್ ಪರ -ವಿರೋಧದ ಲೆಕ್ಕಾಚಾರ ಹೀಗಿದೆ