Oct 18, 2021, 4:51 PM IST
ಬೆಂಗಳೂರು (ಅ. 18): ಪ್ರಧಾನಿ ವಿರುದ್ಧ ಕರ್ನಾಟಕ ಕಾಂಗ್ರೆಸ್ ಟ್ವೀಟ್ ವಾರ್ ಮುಂದುವರೆದಿದೆ.
'ನೀವು ಓಡಾಡಲು ಮನೆಯಲ್ಲಿ ಎತ್ತಿನ ಬಂಡಿ ಇಟ್ಟುಕೊಂಡಿದ್ದೀರಾ ಬೊಮ್ಮಾಯಿಯವರೇ.?'
'ಕಾಂಗ್ರೆಸ್ ಶಾಲೆಗಳನ್ನು ಕಟ್ಟಿಸಿತ್ತು, ಆದರೂ ಪ್ರಧಾನಿ ಮೋದಿ ಓದಲಿಲ್ಲ, ವಯಸ್ಕರ ಶಿಕ್ಷಣ ಯೋಜನೆಯನ್ನೂ ಮಾಡಿತ್ತು ಆದರೂ ಓದಲಿಲ್ಲ. ಭಿಕ್ಷಾಟನೆ ನಿಷೇಧವಿದ್ದರೂ ಭಿಕ್ಷೆ ಬೇಡುವ ಸೋಂಬೇರಿ ಜೀವನದ ಗೀಳಿಗೆ ಬಿದ್ದವರು ಇಂದು ದೇಶವಾಸಿಗಳನ್ನು ಬಿಕ್ಷುಕರನ್ನಾಗಿಸಿದ್ದಾರೆ. ಹೆಬ್ಬೆಟ್ಟು ಗಿರಾಕಿ ಮೋದಿಯಿಂದ ದೇಶ ನರಳುತ್ತಿದೆ. ವಾಸ್ತವಗಳ ಬಗ್ಗೆ ಮಾತನಾಡದ ಪ್ರಧಾನಿ ತಮ್ಮ ಹೆಸರನ್ನು 'ಮೌನೇಂದ್ರ ಮೋದಿ' ಎಂದು ಬದಲಿಸಿಕೊಳ್ಳಲಿ' ಎಂದಿದ್ದಾರೆ.