
ಸರ್ಕಾರವು ಹಣದ ಬದಲು 10 ಕೆಜಿ ಅಕ್ಕಿ ನೀಡಲು ನಿರ್ಧರಿಸಿದೆ. ಗೃಹಲಕ್ಷ್ಮೀ ಹಣ ವಿಳಂಬದ ಬಗ್ಗೆ ಸಚಿವರ ಉಡಾಫೆ ಉತ್ತರಗಳು ಟೀಕೆಗೆ ಗುರಿಯಾಗಿವೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಕುಟುಂಬಕ್ಕೆ ಕ್ಲೀನ್‌ಚಿಟ್ ನೀಡಲಾಗಿದೆ.
ಬೆಂಗಳೂರು (ಫೆ.19): ಈ ತಿಂಗಳಿಂದಲೇ ಹಣದ ಬದಲು 10 ಕೆಜಿ ಅಕ್ಕಿ ನೀಡಲು ಸರ್ಕಾರ ತೀರ್ಮಾನ ಮಾಡಿದೆ. ಜನಾಕ್ರೋಶದ ಬೆನ್ನಲ್ಲೇ ಆಹಾರ ಸಚಿವ ಮುನಿಯಪ್ಪ ಈ ಘೋಷಣೆ ಮಾಡಿದ್ದಾರೆ. ಬಾಕಿ ಗೃಹಲಕ್ಷ್ಮೀ, ಅನ್ನಭಾಗ್ಯ ಹಣ ಕೊಡಲ್ವಾ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
ಇನ್ನೊಂದೆಡೆ ಗ್ಯಾರಂಟಿಯಲ್ಲಿ ಹಣ ನೀಡೋದು ತಿಂಗಳ ಸಂಬಳವಲ್ಲ ಎಂದು ಗೃಹಲಕ್ಷ್ಮೀ ಹಣ ವಿಳಂಬವಾಗಿರುವ ಬಗ್ಗೆ ಇಂಧನ ಸಚಿವ ಕೆಜೆ ಜಾರ್ಜ್ ಉಡಾಫೆ ಉತ್ತರ ನೀಡಿದ್ದಾರೆ. ಇನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್, ಬಿಜೆಪಿಯವರು ತಾವು ಹೇಳಿದ್ದ 10 ಲಕ್ಷ ರೂಪಾಯಿ ಹಾಕಿದ್ರಾ ಎಂದು ಪ್ರಶ್ನೆ ಮಾಡಿದ್ದಾರೆ.
ಮುಡಾ ಹಗರಣಕ್ಕೆ ಸಾಕ್ಷಿ ಸಿಕ್ಕಿಲ್ಲ; ಸಿಎಂ ಸಿದ್ದರಾಮಯ್ಯ ಸೇರಿ 4 ಆರೋಪಿಗಳಿಗೆ ಕ್ಲೀನ್ ಚಿಟ್?
ಮುಡಾ ಕೇಸ್‌ನಲ್ಲಿ ಸಿದ್ದರಾಮಯ್ಯ ಕುಟುಂಬಕ್ಕೆ ಕ್ಲೀನ್‌ಚಿಟ್ ನೀಡಿದೆ. ಸಾಕ್ಷಾಧಾರ ಕೊರತೆ ಎಂದು ನಾಳೆ ಬಿ ರಿಪೋರ್ಟ್ ಸಲ್ಲಿಕೆ ಮಾಡಲಿದೆ. ಶಿಕ್ಷೆ ಕೊಡಿಸದೇ ಬಿಡಲ್ಲ ಎಂದು ದೂರುದಾರ ಸವಾಲು ಹಾಕಿದ್ದಾರೆ.