ಸಚಿವ ಸಂಪುಟ ಪರಿಷ್ಕರಣೆಗೆ 'ತ್ರಿ' ಸೂತ್ರ ಸಿದ್ಧಪಡಿಸಿದ ಹೈಕಮಾಂಡ್; ಯಾರಿಗೆ ಕೋಕ್, ಯಾರಾರಿಗೆ ಮಂತ್ರಿಗಿರಿ ಕಿಕ್!

Jan 3, 2025, 1:35 PM IST

2025ರ ವರ್ಷಾರಂಭದಲ್ಲಿಯೇ ಕೈ ಕೋಟೆಯೊಳಗೆ ದೊಡ್ಡ ಕ್ರಾಂತಿಯ ಸಿಗ್ನಲ್ ಬಂದಿದೆ. ಸಿದ್ದರಾಮಯ್ಯ ಸಂಪುಟ ಸರ್ಜರಿಗೆ ಸೀಕ್ರೆಟ್ ಆಗಿ ತಯಾರಿ ಆರಂಭಿಸಿದ್ದಾರೆ. ಮಂತ್ರಿಗಳಾಗಿ ಏನ್ ಮಾಡಿದ್ದೀರಿ ಅನ್ನೋದ್ರ ರಿಪೋರ್ಟ್​ ಕೊಡಿ ಎಂದಿದೆ ಹೈಕಮಾಂಡ್​. ಇದರಿಂದ ಸಚಿವರುಗಳಿಗೆ ಟೆನ್ಷನ್​ ಶುರುವಾಗಿದೆ​. ಜೊತೆಗೆ ಶಾಸಕರ ಎದೆಯಲ್ಲಿ ಮಿನಿಸ್ಟರ್​​ ಆಗೋ ಆಸೆ ಚಿಗುರೊಡೆದು ಹೆಮ್ಮರವಾಗುತ್ತಿದೆ. ಹೀಗಾಗಿ ಹಲವು ಹಿರಿಯ ಮತ್ತು ಕಿರಿಯ ಶಾಸಕರು ಮಂತ್ರಿಗಿರಿಗೆ ಪಟ್ಟು ಹಿಡಿದಿದ್ದಾರೆ. ಆದರೆ, ಅಲ್ಲಿರೋದು ಕೆಲವೇ ಕೆಲವು ಸೀಟು. ಆದ್ದರಿಂದ ಕೈ ನಾಯಕರು ಹೊಸ ಮಿನಿಸ್ಟರ್ಸ್​ ಆಯ್ಕೆಗೆ ತ್ರಿ ಸೂತ್ರವನ್ನು ಸಿದ್ಧಪಡಿಸಿದ್ದಾರೆ. ಹಾಲಿ ಸಚಿವರ ಮೇಲೆ ತೂಗುಗತ್ತಿಯಂತೆ ತೂಗ್ತಿವೆ ಪಂಚ ಪ್ರಶ್ನೆಗಳು. ಪಕ್ಷದೊಳಗೇನೆ ಹೊಸ ಆಟ ಆರಂಭಿಸಿದ್ಯಾ ಕಾಂಗ್ರೆಸ್ ಹೈಕಮಾಂಡ್..? ಆಸೆಯೇ ಇಲ್ಲಿ ಅಸ್ತ್ರವಾಗಿದ್ಯಾ..? ಕೈ ಸಾಮ್ರಾಜ್ಯದಲ್ಲಿ ನಡೆಯುತ್ತಿರೋ ರಣರೋಚಕ ರಾಜಕೀಯ ಸ್ಟೋರಿಯನ್ನ ತೋರಿಸ್ತೀವಿ ನೋಡಿ. 

ಹಾಗಿದ್ರೆ ಏನಿರಬಹುದು ಆ ಹೊಸ ರಾಜಕೀಯ ಆಟ.. ಸಚಿವ ಸಂಪುಟ ಪುನರ್​ರಚನೆ ಅನ್ನೋ ವಿಚಾರ ಇಡ್ಕೊಂಡು ಕಾಂಗ್ರೆಸ್​ ಹೈಕಮಾಂಡ್​ ತನ್ನ ಪಕ್ಷದೊಳಗೇನೆ ಆ ಆಟ ಆರಂಭಿಸಿದ್ಯಾ.?  ರಾಜ್ಯದಲ್ಲಿ ಸದ್ಯದಲ್ಲಿಯೇ ಸಂಪುಟ ಪುನರ್​ರಚನೆ ಆಗುತ್ತೆ.. ಹೀಗೊಂದು ಚರ್ಚೆ ಮತ್ತೆ ಮೇಲೆದ್ದು ಕೂತಿದೆ. ಆ ಚರ್ಚೆ ಹೌದು ಅನ್ನೋದಕ್ಕೆ ಒಂದಷ್ಟು ಸೂಚನೆಗಳು ಕೂಡ ಸಿಗ್ತಿವೆ. ಆದ್ರೆ, ಇಲ್ಲಿಯೂ ಒಂದು ರಾಜಕೀಯ ಆಟ ಇರಬಹುದು. ಆ ಆಟವನ್ನ ಕಾಂಗ್ರೆಸ್ ಹೈಕಮಾಂಡ್​ ತನ್ನ ಪಕ್ಷದೊಳಗೇನೆ ಆಡ್ತಾ ಇರಬಹುದು ಎನ್ನಲಾಗ್ತಿದೆ. ಒಂದು ವೇಳೆ ಸಚಿವ ಸಂಪುಟ ಪುನರ್​​ರಚನೆ ಆಗೋದು ಖಚಿತವೇ ಆಗಿದ್ರು ಕೂಡ, ಅಲ್ಲಿ ಮತ್ತೊಂದಿಷ್ಟು ಸವಾಲುಗಳು ಸರ್ಕಾರದ ಮುಂದೆ ಬಂದು ನಿಲ್ಲುತ್ತವೆ.