Dec 21, 2021, 11:40 AM IST
ಸ್ವಕ್ಷೇತ್ರ ಶಿಗ್ಗಾವಿಯಲ್ಲಿ (Shiggavi) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಅಧಿಕಾರ ಶಾಶ್ವತವಲ್ಲ ಎಂದು ಭಾವುಕರಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿ ಸೇರಿದಂತೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿದೆ.
ಮುಖ್ಯಮಂತ್ರಿ ಬೊಮ್ಮಾಯಿ (CM Bommai) ಅವರು ಸ್ಥಾನ ತ್ಯಜಿಸುವ ಸನ್ನಿವೇಶ ಎದುರಾಗಿದೆಯೇ ಎಂಬ ಅನುಮಾನಗಳ ನಡುವೆಯೇ ಬರುವ ಸಂಕ್ರಾಂತಿ ಬಳಿಕ ಮುಂಬರುವ ಚುನಾವಣೆ ಗುರಿಯಾಗಿಸಿಕೊಂಡು ಗುಜರಾತ್ (Gujarath Model) ಮಾದರಿಯಂತೆ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡುವ ಸಾಧ್ಯತೆ ಬಗ್ಗೆ ಬಿಜೆಪಿ ಪಾಳೆಯದಲ್ಲಿ ಗಂಭೀರ ಚರ್ಚೆ ಆರಂಭವಾಗಿದೆ.
Belagavi Riot: ಪುಂಡರ ಮೇಲೆ ಗೂಂಡಾ ಕಾಯ್ದೆ, ದೇಶದ್ರೋಹ ಕೇಸ್, ಮತಾಂತರ ನಿಷೇಧಕ್ಕೆ ಅಸ್ತು
ಈಗಿರುವ ಸಂಪುಟದ ಹಲವು ಸಚಿವರ ಬಗ್ಗೆ ಪಕ್ಷದ ವರಿಷ್ಠರು ಸಮಾಧಾನ ಹೊಂದಿಲ್ಲ. ಸಚಿವರು ತಮ್ಮ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಂಡು ಬರುವ ಪ್ರಯತ್ನವನ್ನೂ ತೋರುತ್ತಿಲ್ಲ. ಮೇಲಾಗಿ, ಪಕ್ಷದ ಕಾರ್ಯಕರ್ತರಿಗೆ ಹತ್ತಿರವಾಗಿಲ್ಲ ಎಂಬ ದೂರಿದೆ. ಹೀಗಾಗಿ, ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಮುಂದಿನ ಚುನಾವಣೆ ಉದ್ದೇಶದಿಂದ ಕೆಲಸ ಮಾಡಬಲ್ಲವರನ್ನು ಸಚಿವರನ್ನಾಗಿಸಬೇಕು. ಈಗಿರುವ ಎಲ್ಲರನ್ನೂ ಪಕ್ಷದ ಸಂಘಟನೆಗೆ ಬಳಸಿಕೊಳ್ಳಬಹುದೇ ಎಂಬ ದಿಕ್ಕಿನಲ್ಲೂ ಚಿಂತನೆ ನಡೆಯುತ್ತಿದೆ.