Cabinet Reshuffle: ಗುಜರಾತ್‌, ಉತ್ತರಾಖಂಡ ಮಾದರಿ ರಾಜ್ಯದಲ್ಲೂ ಆಗುತ್ತಾ.?

Mar 12, 2022, 3:09 PM IST

ಬೆಂಗಳೂರು (ಮಾ. 12): ಪಂಚರಾಜ್ಯ ಚುನಾವಣೆಯಲ್ಲಿ ಉತ್ತರ ಪ್ರದೇಶ, ಮಣಿಪುರ, ಗೋವಾ ಹಾಗೂ ಉತ್ತರಾಖಂಡದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.  ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ 2 ನೇ ಅವಧಿಗೆ ಸಿಎಂ ಆಗಲಿದ್ದಾರೆ. ಯೋಗಿ ಗೆಲುವಿನ ಸುನಾಮಿ ಕರ್ನಾಟಕದಲ್ಲೂ ಕಂಪನ ಎಬ್ಬಿಸುತ್ತಿದೆ. ರಾಜ್ಯದಲ್ಲಿ ಸಂಪುಟ ಪುನಾರಚನೆಯಾಗುತ್ತಿದೆ ಎನ್ನಲಾಗುತ್ತಿದೆ. 

Cabinet Expansion: ಸಚಿವರಿಗೆ ಶುರುವಾಯ್ತು ಟೆನ್ಷನ್, 2 ಬಾರಿ ಮಂತ್ರಿಯಾದವರಿಗೆ ಕೊಕ್?

 ನಿರೀಕ್ಷಿತ ಮಟ್ಟಮೀರಿ ಫಲಿತಾಂಶ ಬಂದಿರುವುದರಿಂದ ಗುಜರಾತ್‌ ಅಥವಾ ಉತ್ತರಾಖಂಡ ರಾಜ್ಯಗಳ ಮಾದರಿಯ ಪ್ರಯೋಗಗಳನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಚರ್ಚೆ ಆರಂಭವಾಗಿದೆ. ಉತ್ತರ ಭಾರತದ ರಾಜಕಾರಣಕ್ಕೂ ಮತ್ತು ದಕ್ಷಿಣ ಭಾರತದ ರಾಜಕಾರಣಕ್ಕೂ ವ್ಯತ್ಯಾಸ ಇರುವುದರಿಂದ ಅಲ್ಲಿನ ಪ್ರಯೋಗ ಇಲ್ಲಿ ಯಶಸ್ವಿಯಾಗುವುದೇ ಎಂಬುದರ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ.