ಎರಡೂ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಬಂದ ಮತಗಳನ್ನು ನೋಡಿದಾಗ, ಕಾಂಗ್ರೆಸ್‌ನವರ ಬಿ ಟೀಂ ಆಪಾದನೆಗೆ ಉತ್ತರ ಸಿಕ್ಕಿದೆ. ಈ ಚುನಾವಣಾ ಪಲಿತಾಂಶದ ಬಗ್ಗೆ ನಾವು ಯಾರನ್ನೂ ದೂಷಿಸುವುದಿಲ್ಲ. ಸಂಘಟನೆ ಮಾಡುವಲ್ಲಿ ನಾವು ವಿಫಲರಾಗಿದ್ದೇವೆ' ಎಂದು ಎಚ್‌ಡಿಕೆ ಹೇಳಿದ್ದಾರೆ.
ಬೆಂಗಳೂರು (ನ. 02): ಭಾರೀ ಕುತೂಹಲ ಮೂಡಿಸಿದ್ದ, ಸಿಎಂ ಬೊಮ್ಮಾಯಿಗೆ ಅಗ್ನಿ ಪರೀಕ್ಷೆ ಎನ್ನಲಾಗಿದ್ದ ಸಿಂದಗಿ, ಹಾನಗಲ್ ಉಪಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ್ ಗೆಲುವು ಸಾಧಿಸಿದ್ದಾರೆ. ಹಾನಗಲ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಗೆಲುವು ಸಾಧಿಸಿದ್ದಾರೆ. ಎರಡೂ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು. ಜೆಡಿಎಸ್ ಎರಡೂ ಕ್ಷೇತ್ರದಲ್ಲಿ ಉತ್ತಮ ಪರ್ಪಾಮೆನ್ಸ್ ನೀಡುವಲ್ಲಿ ವಿಫಲವಾಗಿದೆ.