
ರಾಜ್ಯ ಬಿಜೆಪಿಯಲ್ಲಿನ ಬಣ ಬಡಿದಾಟ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ವಿಜಯೇಂದ್ರ ಸ್ವಾಮೀಜಿಗಳ ಬೆಂಬಲ ಪಡೆದು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರೆ, ಯತ್ನಾಳ್ ಬಣ ಹೊಸ ಅಸ್ತ್ರ ಪ್ರಯೋಗಿಸಿದೆ.
ಬೆಂಗಳೂರು(ಫೆ.25) ಕರ್ನಾಟಕ ಬಿಜೆಪಿ ಯಾವತ್ತೂ ಹೈಕಮಾಂಡ್ ಪಾಲಿಗೆ ಬಿಸಿ ತುಪ್ಪ. ಅಧಿಕಾರಕ್ಕೇರಿದರೂ ಕಷ್ಟ, ಅಧಿಕಾರದಲ್ಲಿ ಇಲ್ಲದಿದ್ದರೂ ಕಷ್ಟ. ಹೈಕಮಾಂಡ್ ಮಾತು ಕೇಳುವ ನಾಯಕರು ಬೆರಳೆಣಿ ಮಾತ್ರ. ಇದೀಗ ಬಿವೈ ವಿಜಯೇಂದ್ರ ಹಾಗೂ ಬಸನಗೌಡ್ ಪಾಟೀಲ್ ಯತ್ನಾಳ್ ಬಣದ ಬಡಿದಾಟ ಮತ್ತೊಂದು ಹಂತಕ್ಕೆ ತಲುಪಿದೆ. ಬೆಂಗಳೂರಲ್ಲಿ ಶೀಘ್ರದಲ್ಲೇ ವಿಜಯೇಂದ್ರ ಪರ ಸ್ವಾಮೀಜಿಗಳ ಸಭೆ ನಡೆಸುವ ಸಾಧ್ಯತೆ ಇದೆ. ಬಿಎಸ್ ಯಡಿಯೂರಪ್ಪ ಕಷ್ಟದಲ್ಲಿರುವಾಗ ಸ್ವಾಮೀಜಿಗಳು ಬೆಂಬಲಕ್ಕೆ ನಿಂತಿದ್ದರು. ಇದೆ ಅಸ್ತ್ರವನ್ನು ವಿಜಯೇಂದ್ರ ಪ್ರಯೋಗಿಸುತ್ತಿದ್ದಾರೆ. ಇದಕ್ಕೆ ಯತ್ನಾಳ್ ಬಣದ ಬ್ರಹ್ಮಾಸ್ತ್ರವೇನು?