ರಾಷ್ಟ್ರಧ್ವಜಕ್ಕೆ ಅವಮಾನ, ಈಶ್ವರಪ್ಪ ಮೇಲೆ ಯಾಕಿಲ್ಲ ಕ್ರಮ: ಸದನದಲ್ಲಿ ಸಿದ್ದರಾಮಯ್ಯ ಪ್ರಶ್ನೆ

Feb 16, 2022, 4:05 PM IST

ಬೆಂಗಳೂರು (ಫೆ. 16): ವಿಧಾನ ಮಂಡಲ ಅಧಿವೇಶನ (Assembly Session ) 2 ನೇ ದಿನಕ್ಕೆ ಕಾಲಿಟ್ಟಿದೆ. ಇಮದು ಹಿಜಾಬ್ ಕಿಚ್ಚು ಪ್ರತಿಧ್ವನಿಸಿದೆ. ಈಶ್ವರಪ್ಪ ರಾಷ್ಟ್ರಧ್ವಜ ಹೇಳಿಕೆಗೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದರು. ಈ ವಿಚಾರವಾಗಿ ಕಾಂಗ್ರೆಸ್-ಬಿಜೆಪಿ ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು. 

ಡ್ರೆಸ್‌ಕೋಡ್ ಇದ್ರೆ ವಿದ್ಯಾರ್ಥಿಗಳು ಪಾಲಿಸಲೇಬೇಕು, ಇಲ್ಲದಿದ್ರೆ ನಿಮ್ಮಿಷ್ಟದ ವಸ್ತ್ರ ಓಕೆ: ಸಿಎಂ

ಶಿವಮೊಗ್ಗ ಕಾಲೇಜಿನಲ್ಲಿ ತ್ರಿವರ್ಣ ಧ್ವಜ ತೆಗೆದು ಕೇಸರಿ ಬಾವುಟ ಹಾರಿಸಿಲ್ಲ. ರಾಷ್ಟ್ರ ಧ್ವಜಕ್ಕೆ ಏನು ಗೌರವ ಕೊಡಬೇಕು ಅದನ್ನು ದೇಶದಲ್ಲಿ ಅನ್ನ ತಿನ್ನುವ ಪ್ರತಿಯೊಬ್ಬನು ಕೊಡಬೇಕು. ಇವತ್ತಲ್ಲ ನಾಳೆ ಕೆಂಪುಕೋಟೆ ಮೇಲೆ ಕೇಸರಿ ಬಾವುಟ ಹಾರಿಸುತ್ತೇವೆ. ಅದನ್ನು ಕೇಳಲು ಅವರಾರ‍ಯರು ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಕೆ.ಎಸ್‌.ಈಶ್ವರಪ್ಪ ಹೇಳಿದ್ದರು.