ಸಿಎಂ ಖಾದಿಗೆ ಸೆಡ್ಡು ಹೊಡೆದ ಖಾಕಿ: ಎಎಸ್‌ಪಿ ಬರಮನಿ ರಾಜೀನಾಮೆ ರಹಸ್ಯ ರಿವೀಲ್

ಸಿಎಂ ಖಾದಿಗೆ ಸೆಡ್ಡು ಹೊಡೆದ ಖಾಕಿ: ಎಎಸ್‌ಪಿ ಬರಮನಿ ರಾಜೀನಾಮೆ ರಹಸ್ಯ ರಿವೀಲ್

Published : Jul 04, 2025, 04:32 PM IST
ಸಿಎಂ ಸಿದ್ದರಾಮಯ್ಯ ಅವರಿಂದ ಅವಮಾನಿತರಾದ ಎಎಸ್ಪಿ ನಾರಾಯಣ ಬರಮನಿ ರಾಜೀನಾಮೆ ನೀಡಿದ್ದಾರೆ. ಈ ಘಟನೆ ಖಾಕಿ ಮತ್ತು ಖಾದಿ ನಡುವಿನ ಸಂಘರ್ಷಕ್ಕೆ ನಾಂದಿ ಹಾಡಿದೆ. ಸರ್ಕಾರದ ಮಧ್ಯಸ್ಥಿಕೆಯ ನಂತರ ಬರಮನಿ ರಾಜೀನಾಮೆ ಹಿಂಪಡೆಯುವ ಸಾಧ್ಯತೆ ಇದೆ.

ಬೆಂಗಳೂರು (ಜು. 4): ಸರ್ಕಾರದ ವೇದಿಕೆಯಲ್ಲೇ ಪೋಲೀಸ್ ಅಧಿಕಾರಿಗೆ ಅಪಮಾನವಾಗಿದ್ದು, ಖಾಕಿ-ಖಾದಿ ನಡುವಿನ ಸಂಘರ್ಷಕ್ಕೆ ನಾಂದಿ ಹಾಡಿದೆ. ಹಿರಿಯ ಪೊಲೀಸ್ ಅಧಿಕಾರಿ ನಾರಾಯಣ ಬರಮನಿ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಹೊಡೆಯಲು ಕೈ ಎತ್ತಿದ್ದರಿಂದ ಭಾರೀ ಬೇಸರಗೊಂಡಿದ್ದು, ತಮ್ಮ ಆತ್ಮಾಭಿಮಾನಕ್ಕೆ ಧಕ್ಕೆಯಾಗಿದ್ದಕ್ಕೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸದೆ, ರಾಜೀನಾಮೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಎಸ್‌ಪಿ ನಾರಾಯಣ ಬರಮನಿ ಎಂಬವರು ಈ ಬೆಳವಣಿಗೆಯ ಕೇಂದ್ರಬಿಂದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಅಸಮರ್ಥ ವ್ಯಕ್ತಿಗತ ಟೀಕೆ ಎದುರಿಸಿದ್ದ ಈ ಅಧಿಕಾರಿ, ತಾನು ಅವಮಾನಿತನಾಗಿದ್ದಾಗಿ ಭಾವಿಸಿ ತನ್ನ ಹುದ್ದೆಯಿಂದ ಕೆಳಗೆ ಇಳಿಯಲು ನಿರ್ಧರಿಸಿದ್ದಾರೆ. ಅವರ ರಾಜೀನಾಮೆ ಪತ್ರದಲ್ಲಿರುವ ಅಂಶಗಳು ರಾಜ್ಯದ ಆಡಳಿತ ಯಂತ್ರದೊಳಗಿನ ಕಲಹವನ್ನು ಹೊರಹಾಕಿವೆ. ರಾಜಕೀಯ ವೇದಿಕೆಯಲ್ಲಿ ಪೊಲೀಸ್ ಅಧಿಕಾರಿಗೆ ಕೊಂಚ ಗೌರವವಿಲ್ಲದ ರೀತಿಯಲ್ಲಿ ವರ್ತನೆಯಾಗಿದ್ದು, ಆತ್ಮಾಭಿಮಾನಕ್ಕೆ ಭಾರಿ ಧಕ್ಕೆ ತಂದಿದೆ. ಅಂದು ಸ್ಥಳದಲ್ಲೇ ಮುಖ್ಯಮಂತ್ರಿಗಳ ಧೋರಣೆಗೆ ನಾನು ತಕ್ಷಣವೇ ಪ್ರತಿಕ್ರಿಯಿಸಲು ಯೋಚನೆ ಮಾಡಿದ್ದೆ. ನೀವು ಮಾಡಿದ್ದು ತಪ್ಪು ಎಂದು ಹೇಳಬೇಕೆಂದಿದ್ದೆ. ಆದರೆ ನಾನು ಸುಮ್ಮನಾದೆ. ಕಾರಣ,ಸಿಎಂಗೆ ಸಾರ್ವಜನಿಕವಾಗಿ ಮುಜುಗರವಾಗಬಾರದು ಎಂದು ಎಂದು ನಾರಾಯಣ ಬರಮನಿ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬರಮನಿ ರಾಜೀನಾಮೆಗೆ ಸರ್ಕಾರದ ಮರು ಪ್ರತಿಕ್ರಿಯೆಯು ಕೂಡಾ ತಕ್ಷಣವೇ ಬಂದಿದೆ. ಇವರ ಮನವೊಲಿಸಲು ಹಲವರು ಯತ್ನಿಸಿದ್ದು, ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ಮಾತನಾಡಿದ್ದಾರೆ. ರಾಜೀನಾಮೆ ಹಿಂತೆಗೆದುಕೊಳ್ಳುವಂತೆ ಸೂಚನೆಯನ್ನೂ ನೀಡಿದ್ದಾರೆ. ಇನ್ನು ರೈತ ಸಂಘಟನೆಗಳು, ನಾಗರಿಕ ಹೋರಾಟಗಾರರು ಮತ್ತು ಕೆಲವರು ರಾಜಕೀಯವಾಗಿ ಈ ಘಟನೆಯನ್ನು ಖಂಡಿಸಿದ್ದಾರೆ. ಸರ್ಕಾರಿ ವೇದಿಕೆಯಲ್ಲಿ ಪೊಲೀಸ್ ಅಧಿಕಾರಿಗೆ ಅಪಮಾನವಾಗುವುದು ಸರಿಯಲ್ಲ  ಎಂದು ಅಭಿಪ್ರಾಯ ಹೊರಹಾಕಿದ್ದಾರೆ.

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
Read more