ರಾಜ್ಯದಲ್ಲಿ ಈವರೆಗೆ 1 ಕೋಟಿಗೂ ಹೆಚ್ಚು ಡೋಸ್ ಲಸಿಕೆ ವಿತರಿಸಲಾಗಿದೆ. ಆದರೆ, ಈ ಎರಡನೇ ಡೋಸ್ ಲಸಿಕೆ ಪಡೆದು ಲಸಿಕಾಕರಣ ಪ್ರಕಿಯೆಯನ್ನು ಸಂಪೂರ್ಣಗೊಳಿಸಿರುವುದು ಕೇವಲ 17.23 ಲಕ್ಷ ಮಂದಿ ಮಾತ್ರ.
ಬೆಂಗಳೂರು (ಮೇ. 07): ರಾಜ್ಯದಲ್ಲಿ ಈವರೆಗೆ 1 ಕೋಟಿಗೂ ಹೆಚ್ಚು ಡೋಸ್ ಲಸಿಕೆ ವಿತರಿಸಲಾಗಿದೆ. ಆದರೆ, ಈ ಎರಡನೇ ಡೋಸ್ ಲಸಿಕೆ ಪಡೆದು ಲಸಿಕಾಕರಣ ಪ್ರಕಿಯೆಯನ್ನು ಸಂಪೂರ್ಣಗೊಳಿಸಿರುವುದು ಕೇವಲ 17.23 ಲಕ್ಷ ಮಂದಿ ಮಾತ್ರ. ಉಳಿದಂತೆ 83.35 ಲಕ್ಷ ಮಂದಿ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಬುಧವಾರ 224 ಲಸಿಕಾ ಕೇಂದ್ರದಲ್ಲಿ 1.23 ಲಕ್ಷ ಮಂದಿಗೆ ಲಸಿಕೆ ವಿತರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.