Jul 28, 2023, 5:42 PM IST
ಬೆಂಗಳೂರು(ಜು.28) ಉಡುಪಿ ವಿಡಿಯೋ ಪ್ರಕರಣ ಹಾಗೂ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಯಿಂದ ಹಿಂದೂ ಹೆಣ್ಣುಮಕ್ಕಳು ಶಾಲೆಗೆ ಬರುಲು ಭಯಪಡುವಂತ ವಾತಾವರಣ ನಿರ್ಮಾಣವಾಗಿದೆ ಎಂದು ಕಾರ್ಕಳ ಬಿಜೆಪಿ ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ. ಮುಸ್ಲಿಂ ವಿದ್ಯಾರ್ಥಿನಿಯರು ರಹಸ್ಯವಾಗಿ ವಿಡಿಯೋ ಮಾಡಿದ್ದಾರೆ. ಈ ಪ್ರಕರಣವನ್ನು ಮುಚ್ಚಿಹಾಕಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸುತ್ತಿದೆ. ವಿಡಿಯೋ ಮಾಡಿದ್ದು ತಮಾಷೆಗಾಗಿ ಎಂದಿದ್ದಾರೆ. ಡಿಜೆ ಹಳ್ಳಿ, ಕೆಜೆ ಹಳ್ಳಿಯಲ್ಲಿ ಬೆಂಕಿ ಹಚ್ಚಿದವರು ಸಿದ್ದರಾಮಯ್ಯ ಸರ್ಕಾರಕ್ಕೆ ಅಮಾಯಕರಂತೆ ಕಾಣುತ್ತಿದ್ದಾರೆ. ಸದನದಲ್ಲಿ ಯಾರು ಇಲ್ಲದೆ ಇರುವಾಗ ಭಾಷಣ ಮಾಡುವ ಸಿದ್ದಾರಮಯ್ಯಗೆ ಇದೀಗ ಉಡುಪಿ ಪ್ರಕರಣ ತನಿಖೆ ಮಾಡಿಸುವ ಧಮ್ಮು ತಾಕತ್ತು ಇಲ್ಲವೇ ಎಂದು ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.