ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ, ನಾಡಧ್ವಜ ದಹನ ಮಾಡಿರುವ ಎಂಇಎಸ್ (MES) ಸಂಘಟನೆಯ ನಿಷೇಧಕ್ಕಾಗಿ ಡಿ.31 ರಂದು ಕರೆದಿರುವ ಕರ್ನಾಟಕ ಬಂದ್ ಕೇವಲ ಕನ್ನಡಪರ ಸಂಘಟನೆಗಳ ಬಂದ್ ಅಲ್ಲ, ಇಡೀ ನಾಡಿನ ಸ್ವಾಭಿಮಾನಿ ಕನ್ನಡಿಗರ ಬಂದ್ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್‌ಕುಮಾರ್ ಶೆಟ್ಟಿ ಹೇಳಿದ್ದಾರೆ.
ಬೆಂಗಳೂರು (ಡಿ. 26): ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ, ನಾಡಧ್ವಜ ದಹನ ಮಾಡಿರುವ ಎಂಇಎಸ್ ಸಂಘಟನೆಯ ನಿಷೇಧಕ್ಕಾಗಿ ಡಿ.31ರಂದು ಕರೆದಿರುವ ಕರ್ನಾಟಕ ಬಂದ್ ಕೇವಲ ಕನ್ನಡಪರ ಸಂಘಟನೆಗಳ ಬಂದ್ ಅಲ್ಲ, ಇಡೀ ನಾಡಿನ ಸ್ವಾಭಿಮಾನಿ ಕನ್ನಡಿಗರ ಬಂದ್ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್‌ಕುಮಾರ್ ಶೆಟ್ಟಿ ಹೇಳಿದ್ದಾರೆ.
ಆದರೆ ಈ ಬಂದ್ ಬಗ್ಗೆ ಒಂದಷ್ಟು ಗೊಂದಲಗಳಿವೆ. ಕನ್ನಡ ಚಿತ್ರರಂಗ ನೈತಿಕ ಬೆಂಬಲ ನೀಡುವುದಾಗಿ ಹೇಳಿದೆ. ನಮಗೆ ನೈತಿಕ ಬೆಂಬಲ ಬೇಡ, ಬಾಹ್ಯ ಬೆಂಬಲ ಘೋಷಿಸಿ ಎಂದು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ.