Belagavi Riot: ಬೆಂಗಳೂರಲ್ಲಿ ಶಿವಾಜಿ ಪುತ್ಥಳಿಗೆ ಮಸಿ ಬಳಿದ 7 ಮಂದಿ ವಶಕ್ಕೆ

Dec 19, 2021, 1:28 PM IST

ಬೆಂಗಳೂರು (ಡಿ. 19): ರಾಜಧಾನಿಯಲ್ಲಿ (Bengaluru) ಶಿವಾಜಿ ಮಹಾರಾಜ್ (Shivaji) ಪುತ್ಥಳಿಗೆ ಕಪ್ಪುಮಸಿ ಬಳಿದ 13 ಆರೋಪಿಗಳ ಪೈಕಿ 7 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. 

Belagavi Violence: ಕರ್ನಾಟಕ- ಮಹಾರಾಷ್ಟ್ರ ಧಗಧಗ: ಬೆಂಕಿ ಗಲಾಟೆಯ ಹಿಮದೆ ರಾಜಕಾರಣದ ಕರಿನೆರಳು..!

ಕನ್ನಡಿಗ ರಣಧೀರ ಪಡೆಯ ಚೇತನ್ ಕುಮಾರ್, ಕನ್ನೆ ಚಳುವಳಿ ಕೇಂದ್ರ ಸಮಿತಿ ಅಧ್ಯಕ್ಷ ಗುರುದೇವ ನಾರಾಯಣ ಕುಮಾರ್, ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿದ ನವೀನ್ ಗೌಡ ಸೇರಿದಂತೆ 7 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಬೆಳಗಾವಿಯಲ್ಲಿ (Belagavi) ಎಂಇಎಸ್ (MES) ಪುಂಡರು ಕನ್ನಡ ಧ್ವಜ ಸುಟ್ಟು ಹಾಕಿದ್ದಕ್ಕೆ, ಪ್ರತಿಕಾರವಾಗಿ ಶಿವಾಜಿ ಪುತ್ಥಳಿಗೆ ಕಪ್ಪು ಮಸಿ ಬಳಿದಿದ್ದರು. ಇದಕ್ಕೆ ಪ್ರತಿಯಾಗಿ ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ಮಿತಿ ಮೀರಿದೆ. ಕನ್ನಡಿಗರ ವಾಹನಗಳ ಮೇಲೆ ದಾಳಿ, ರಾಯಣ್ಣ ಪ್ರತಿಮೆ ಧ್ವಂಸ ನಡೆಸಿದ್ದಾರೆ. ಸದ್ಯ ಬೆಳಗಾವಿಯಲ್ಲಿ ನಿಷೇಧಾಜ್ಞೆ (Curfew) ಜಾರಿಯಲ್ಲಿದ್ದು, ಕರವೇ ಪ್ರತಿಭಟನೆಗೆ ಮುಂದಾಗಿದೆ.