Karnataka Bandh: ನೈತಿಕ ಬೆಂಬಲ ಎಂದ ಸಿದ್ದು, ಬಂದ್ ಬೇಕೇನ್ರಿ ಎಂದ ಡಿಕೆಶಿ, ಮೂಡದ ಒಮ್ಮತ

Dec 27, 2021, 9:43 AM IST

ಬೆಂಗಳೂರು (ಡಿ. 27): ಎಂಇಎಸ್ ಪುಂಡಾಟಿಕೆ (MES) ರಾಯಣ್ಣ ಪ್ರತಿಮೆ ಧ್ವಂಸ ವಿಚಾರ ಖಂಡಿಸಿ, ಡಿ. 31 ಕ್ಕೆ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಿವೆ. ಈ ಬಂದ್‌ ಬಗ್ಗೆ ಕನ್ನಡ ಪರ ಸಂಘಟನೆಗಳಲ್ಲೇ ಭಿನ್ನಾಭಿಪ್ರಾಯ ಉಂಟಾಗಿದೆ. 

'ಕರ್ನಾಟಕ ಬಂದ್‌ಗೆ ನಮ್ಮ ನೈತಿಕ ಬೆಂಬಲವಿದೆ. ಎಂಇಎಸ್‌ ಪುಂಡರನ್ನು ಖಂಡಿಸಿದ್ರೆ ಆಗಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಬೇಕು. ಈ ಬಗ್ಗೆ ಮೋದಿಯವರಿಗೆ ಮನವರಿಕೆ ಮಾಡಿಕೊಡಬೇಕು' ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

'ಈಗಾಗಲೇ ಕೊರೋನಾದಿಂದ ಜನ ಸಂಕಷ್ಟದಲ್ಲಿದ್ಧಾರೆ. ಇಂತಹ ಸಂದರ್ಭದಲ್ಲಿ ಬಂದ್ ಬೇಕೇನ್ರಿ..? ಈ ಬಗ್ಗೆ ನಾನೇನು ಹೇಳಲ್ಲ. ಸರ್ಕಾರವೇ ಉತ್ತರ ಕೊಡುತ್ತದೆ' ಎಂದು ಡಿಕೆ ಶಿವಕುಮಾರ್ ಹೇಳಿದ್ಧಾರೆ.