ಕೋವಿಡ್ ಸೋಂಕಿತರ ನರಳಾಟವನ್ನು ನೋಡಿದ್ದೇವೆ. ಯಾರಿಗೂ ಇಂತಹ ಸ್ಥಿತಿ ಬರಬಾರದಪ್ಪಾ ಎಂದುಕೊಳ್ಳುತ್ತೇವೆ. ಇಲ್ಲೊಬ್ಬ ಪೊಲೀಸಪ್ಪ ಕೊರೊನಾ ಸೋಂಕಿತನ ನರಳಾಟ ನೋಡಿ, ಹೆಡ್ ಕಾನ್ಸ್‌ಟೇಬಲ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಬೆಂಗಳೂರು (ಏ. 14): ಕೋವಿಡ್ ಸೋಂಕಿತರ ನರಳಾಟವನ್ನು ನೋಡಿದ್ದೇವೆ. ಯಾರಿಗೂ ಇಂತಹ ಸ್ಥಿತಿ ಬರಬಾರದಪ್ಪಾ ಎಂದುಕೊಳ್ಳುತ್ತೇವೆ. ಇಲ್ಲೊಬ್ಬ ಪೊಲೀಸಪ್ಪ ಕೊರೊನಾ ಸೋಂಕಿತನ ನರಳಾಟ ನೋಡಿ, ಹೆಡ್ ಕಾನ್ಸ್‌ಟೇಬಲ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಲಬುರಗಿಯ ಜಿಮ್ಸ್ ಕೋವಿಡ್ ವಾರ್ಡ್‌ನಲ್ಲಿ ಘಟನೆ ನಡೆದಿದೆ.
ಹೆಡ್ ಕಾನ್ಸ್‌ಟೇಬಲ್ ಆನಂದ್ ಪ್ರಸಾದ್ ನ್ಯೂಮೋನಿಯಾದಿಂದ ಬಳಲುತ್ತಿದ್ದರು. ಕೊರೊನಾ ರಿಪೋರ್ಟ್ ನೆಗೆಟಿವ್ ಬಂದಿದ್ದರೂ, ಸೋಂಕಿತನ ನರಳಾಟ ನೋಡಿ ಭಯದಿಂದಲೇ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.