Oct 8, 2021, 12:25 PM IST
ಬೆಂಗಳೂರು (ಅ. 08): ಕಟ್ಟಡ ಸಾಮಗ್ರಿಗಳ ಪೂರೈಕೆದಾರ ರಾಹುಲ್ ಎಂಟರ್ ಪ್ರೈಸಸ್‌ನ ಕಚೇರಿ ಹಾಗೂ ರಾಹುಲ್ ಮನೆ ಮೇಲೆ ನಿನ್ನೆ ಐಟಿ ದಾಳಿ ನಡೆದಿತ್ತು. ಇಂದು ಮತ್ತೆ ಐಟಿ ಅಧಿಕಾರಿಗಳು ಕಚೇರಿಗೆ ಬಂದಿದ್ಧಾರೆ. ಹಾರ್ಡ್ ಡಿಸ್ಕ್, ಲ್ಯಾಪ್‌ಟ್ಯಾಪ್ ಪರಿಶೀಲಿಸಿದ್ದಾರೆ.
ಐಟಿ ದಾಳಿ: ಉಮೇಶ್ ಆಪ್ತ ಅರವಿಂದ್ ಮನೇಲಿ ಮುಂದುವರೆದ ಶೋಧ
ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ನೀರಾವರಿ ನಿಗಮಗಳಲ್ಲಿ ಸುಮಾರು 4000ಕ್ಕೂ ಅಧಿಕ ಕೋಟಿ ರು. ಮೊತ್ತದ ಕಾಮಗಾರಿ ಗುತ್ತಿಗೆ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರವೇ ಐಟಿ ದಾಳಿಗೆ ಕಾರಣ ಎನ್ನಲಾಗಿದೆ. ಈ ಅವ್ಯವಹಾರದ ಬಗ್ಗೆ ಇನ್ನಿತರ ಗುತ್ತಿಗೆದಾರರು ಐಟಿ ಇಲಾಖೆಗೆ ದೂರು ನೀಡಿದ್ದರು ಎಂದೂ ಹೇಳಲಾಗಿದೆ.