News Hour: ರದ್ದಾಗುತ್ತಾ ದರ್ಶನ್ ಮಧ್ಯಂತರ ಬೇಲ್?

Dec 6, 2024, 11:12 PM IST

ಬೆಂಗಳೂರು (ಡಿ.6): ಬೆನ್ನುನೋವಿನಿಂದ ಆಸ್ಪತ್ರೆ ಸೇರಿದ್ದ ದರ್ಶನ್ ಹೊಸ ನಾಟಕ ಶುರುವಾಗಿದೆ. ಸರ್ಜರಿ ಆಗಿಲ್ಲ, ಮಧ್ಯಂತರ ಜಾಮೀನು ವಿಸ್ತರಿಸಲು ಮನವಿ ಮಾಡಿದ್ದಾರೆ. ಮತ್ತೆ ಜೈಲಿಗೆ ಕಳಿಸಿ ಎಂದು ಎಸ್‌ಪಿಪಿ ಪ್ರಬಲ ವಾದ ಮಂಡಿಸಿದ್ದಾರೆ.

ದೆಹಲಿಯಲ್ಲಿ ಬಿಜೆಪಿಯ ಶಿಸ್ತು ಸಮಿತಿ ಮುಂದೆ ವಿಚಾರಣೆಗೆ ಹಾಜರಾದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೈಕಮಾಂಡ್‌ ನನಗೆ ಶಹಬ್ಬಾಸ್‌ಗಿರಿ ಕೊಟ್ಟಿದೆ ಎಂದಿದ್ದಾರೆ. ನನ್ನ ವಿರುದ್ಧ ಶಿಸ್ತು ಕ್ರಮದ ಪ್ರಶ್ನೆಯೇ ಇಲ್ಲ ಎಂದು ಯತ್ನಾಳ್‌ ಹೇಳಿದ್ದಾರೆ.

2 ವರ್ಷದ ಪ್ರೀತಿ, 3 ತಿಂಗಳ ಹಿಂದೆ ಓಡಿಹೋಗಿ ಮದುವೆ; ಗಂಡನ ಮನೆಯಲ್ಲಿ ಬದುಕಲಾಗದೆ ಸಾವು ಕಂಡ ಯುವತಿ!

ಇನ್ನೊಂದೆಡೆ, ಅಮೆರಿಕ ಒಸಿಸಿಆರ್​ಪಿ ನ್ಯೂಸ್ ವೆಬ್‌ಸೈಟ್‌ ಕಳ್ಳಾಟ ಬಯಲಾಗಿದೆ. ಜಾರ್ಜ್​ ಸೋರೋಸ್​ ಸಂಸ್ಥೆಗಳಿಂದ ಕೋಟಿ ಕೋಟಿ ಫಂಡಿಂಗ್​ ಇದಕ್ಕೆ ಬರುತ್ತಿದೆ. ಲೇಖನ ಉಲ್ಲೇಖಿಸ್ತಿದ್ದ ರಾಹುಲ್ ದೇಶದ್ರೋಹಿ ಎಂದು ಬಿಜೆಪಿ ಹೇಳಿದೆ.