ಕೊರೋನಾ ಸ್ಪೋಟ ಎದುರಿಸಲು ಸಜ್ಜಾಗಿದೆಯಾ ಬೆಂಗಳೂರು?

Jun 12, 2020, 2:15 PM IST

ಬೆಂಗಳೂರು(ಜೂ.12): ಕೊರೋನಾ ಎನ್ನುವ ಹೆಮ್ಮಾರಿ ಇಡೀ ಬೆಂಗಳೂರನ್ನೇ ತನ್ನ ಆಪೋಶನ ತೆಗೆದುಕೊಳ್ಳುವತ್ತ ಮುನ್ನುಗ್ಗುತ್ತಿದೆ. ದಿನದಿಂದ ದಿನಕ್ಕೆ ಉದ್ಯಾನನಗರಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಗುರುವಾರ(ಜೂ.11) ಒಂದೇ ದಿನ ನಗರದಲ್ಲಿ ಕೊರೋನಾ ಆರು ಮಂದಿಯನ್ನು ಬಲಿ ಪಡೆದಿತ್ತು. 

ಕೊರೋನಾ ಹೆಮ್ಮಾರಿಯನ್ನು ಎದುರಿಸಲು ಆರೋಗ್ಯ ಇಲಾಖೆಯಡಿ ಬೆಂಗಳೂರಿನಲ್ಲಿ 15 ಆಸ್ಪತ್ರೆಗಳಿವೆ. ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆರಿಗೆ ಆಸ್ಪತ್ರೆಗಳು ಸೇರಿದಂತೆ 150 ಆಸ್ಪತ್ರೆಗಳಿವೆ. ಬಿಬಿಎಂಪಿ ವ್ಯಾಪ್ತಿಯಲ್ಲೇ ಸಾವಿರ ಬೆಡ್ ಸಿಗಲಿವೆ. ನಗರದ ಸರ್ಕಾರಿ ಆಸ್ಪತ್ರೆಯಲ್ಲೇ 5 ಸಾವಿರ ಬೆಡ್ ರೆಡಿಯಿವೆ.

ಕೊರೋನಾ ಬಿಕ್ಕಟ್ಟು ಸ್ವಾವಲಂಬನೆಗೆ ಸದಾವಕಾಶ: ಮೋದಿ

ಕೊರೋನಾ ಎದುರಿಸಲು ಬೆಂಗಳೂರು ಯಾವ ರೀತಿ ಸಜ್ಜಾಗಿದೆ ಎನ್ನುವುದರ ಇಂಚಿಂಚು ಮಾಹಿತಿಯನ್ನು ಸುವರ್ಣ ನ್ಯೂಸ್ ಎಕ್ಸ್‌ಕ್ಲೂಸಿವ್ ವರದಿಗಳ ಮೂಲಕ ನಿಮ್ಮ ಮುಂದಿಡುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.