ಹೊಸೂರಿನ ಬದಲು ಬೆಂಗಳೂರು ಗ್ರಾಮಾಂತರಕ್ಕೆ ಮೆಟ್ರೋ ಕಲ್ಪಿಸಲಿ: ಕರವೇ ಪ್ರವೀಣ್ ಕುಮಾರ್

ಹೊಸೂರಿನ ಬದಲು ಬೆಂಗಳೂರು ಗ್ರಾಮಾಂತರಕ್ಕೆ ಮೆಟ್ರೋ ಕಲ್ಪಿಸಲಿ: ಕರವೇ ಪ್ರವೀಣ್ ಕುಮಾರ್

Published : Aug 04, 2023, 08:46 PM IST

ಬೊಮ್ಮಸಂದ್ರ-ಹೊಸೂರು ಮೆಟ್ರೋ ಅಧ್ಯಯನಕ್ಕೆ ಟೆಂಡರ್‌ ಕರೆಯಲು ಮುಂದಾಗಿದ್ದು, ಇದಕ್ಕೆ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಖಂಡಿಸಿದ್ದಾರೆ. 
 

ಬೆಂಗಳೂರು (ಆ.04): ಬೊಮ್ಮಸಂದ್ರ-ಹೊಸೂರು ಮೆಟ್ರೋ ಅಧ್ಯಯನಕ್ಕೆ ಟೆಂಡರ್‌ ಕರೆಯಲು ಮುಂದಾಗಿದ್ದು, ಇದಕ್ಕೆ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಖಂಡಿಸಿದ್ದಾರೆ. ಬೊಮ್ಮಸಂದ್ರ - ಹೊಸೂರು ಮೆಟ್ರೋ ಆಗುವುದಕ್ಕೆ ಬಿಡೋದಿಲ್ಲ. ಒಂದು ವೇಳೆ ಮೆಟ್ರೋ ಆದರೆ ತಮಿಳರಿಗೆ ರೆಡ್ ಕಾರ್ಪೆಟ್ ಹಾಸಿದ ಹಾಗಾಗುತ್ತೆ. ನಾವು ಕನ್ನಡಿಗರು ಯಾರೂ ಕೆಲಸ ಅರಸಿ ಹೊಸೂರಿಗೆ ಹೋಗೋದಿಲ್ಲ. ಈಗಾಗಲೇ ಬೆಂಗಳೂರಿನಲ್ಲಿ ತಮಿಳರ ಸಂಖ್ಯೆ ಜಾಸ್ತಿಯಾಗಿದೆ. ನಮ್ಮ ಉದ್ಯೋಗವನ್ನು ಕಿತ್ತುಕೊಳ್ತಿದಾರೆ. ನಮಗೆ ಕಾವೇರಿ ನೀರಿನ ವಿಚಾರದಲ್ಲಿ ತಗಾದೆ ತೆಗೆದವರು ತಮಿಳರು. ಅವರಿಗೆ ನಾವ್ಯಾಕೆ ಮೆಟ್ರೋ ಮಾಡೋಕೆ ಬಿಡ್ಬೇಕು?

ಅಲ್ಲಿ ಮಾಡೋ ಬದಲು ಬೆಂಗಳೂರಿನ ಗ್ರಾಮಾಂತರ ಪ್ರದೇಶಗಳಲ್ಲಿ ಮೆಟ್ರೋ ಸೇವೆ ಕಲ್ಪಿಸಲಿ. ನಮ್ಮ ಕನ್ನಡಿಗರಿಗೆ ಇದರಿಂದ ಉಪಯೋಗ ಆಗುತ್ತೆ. ದೇವನಹಳ್ಳಿ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಭಾಗದಿಂದ ಬರುವವರಿಗೆ ಇದರಿಂದ ಸಹಾಯ ಆಗುತ್ತೆ. ಕೇಂದ್ರ ಸರ್ಕಾರ ಈ ತರಹದ ನೀತಿಗಳಿಂದ ಈಗಾಗಲೇ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದೆ. ಒಂದು ವೇಳೆ ಮೆಟ್ರೋಗೆ ಅನುಮೋದನೆ ಕೊಟ್ರೆ ತಮಿಳು ನಟರ ಹೆಸರನ್ನೇ ಮೆಟ್ರೋ ಸ್ಟೇಷನ್‌ಗೆ ಇಡ್ತಾರೆ. ಅವರ ಬ್ಯಾನರ್‌ಗಳನ್ನೇ ನಾವು ನೋಡ್ಬೇಕಾಗುತ್ತೆ. ಈ ಬಗ್ಗೆ ಸಂಸದರನ್ನು, ಮುಖ್ಯಮಂತ್ರಿಗಳನ್ನು ಭೇಟಿಯಾಗಿ ನಾವು ಮನವಿ ಮಾಡ್ತೇವೆ. ಇದರ ಜೊತೆಗೆ ಕರವೇ ಕಡೆಯಿಂದ ಉಗ್ರ ಹೋರಾಟ ಮಾಡುತ್ತೇವೆ ಎಂದು ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದರು.

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
Read more