Nov 23, 2020, 1:35 PM IST
ಬೆಂಗಳೂರು (ನ. 23): ಹಸಿದವರಿಗೆ, ಬಡವರಿಗೆ ಅನ್ನ ನೀಡುವ ಮಹತ್ವಾಕಾಂಕ್ಷೆ ಯೋಜನೆ ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಅಪಸ್ವರ ಕೇಳಿ ಬರುತ್ತಿದೆ. ಪ್ರತಿದಿನ ಸಿಗುತ್ತಿದ್ದ ತರತರ ತಿಂಡಿ, ಊಟಕ್ಕೆ ಬ್ರೇಕ್ ಬಿದ್ದಿದೆ. ಮೇನ್ ಸ್ವಿಚ್‌ಬೋರ್ಡ್ ಹಾಳಾಗಿದ್ದು, 1 ತಿಂಗಳಾದರೂ ರಿಪೇರಿ ಮಾಡಿಸಿಲ್ಲ. ಹಾಗಾಗಿ ಪ್ರತಿದಿನ ಅನ್ನ, ತಿಳಿಸಾರು, ಚಿತ್ರಾನ್ನ ಮಾತ್ರ ಸಿಗುತ್ತಿದೆ. ಮಡಿಕೇರಿಯ ಇಂದಿರಾ ಕ್ಯಾಂಟೀನ್‌ನ ಚಿತ್ರಣವಿದು.
ಆರು ವರ್ಷಗಳ ಹಿಂದೆ ಕಳೆದು ಹೋಗಿದ್ದ ನಾಯಿ ಪೋಷಕರ ಮಡಿಲಿಗೆ, ಕ್ಯಾನ್ಸರ್ಗೆ ಹೊಸ ಚಿಕಿತ್ಸೆ
ಇಡ್ಲಿ ಇದೆ, ಚಟ್ನಿ ಇಲ್ಲ, ಸಾಂಬಾರು ಮಾಡೋಕೆ ಮಿಕ್ಸರ್ ಓಡ್ತಾ ಇಲ್ಲ, ಕೈ ತೊಳೆಯಲು ಬಕೆಟ್ ನೀರು, ಪಾತ್ರೆ ತೊಳೆಯಲು ನೀರಿಲ್ಲ... ಇದು ಅಲ್ಲಿನ ಚಿತ್ರಣ...ಬಂದಿರೋ ಗ್ರಾಹಕರು ಇದ್ದಿದ್ದನ್ನೇ ಸೇವಿಸಿ ಹೋಗಬೇಕಾಗಿದೆ. ಈ ಸಮಸ್ಯೆಯ ಬಗ್ಗೆ ಬಿಗ್ 3 ಬೆಳಕು ಚೆಲ್ಲಿದೆ.