Mar 12, 2023, 4:54 PM IST
ಬೆಂಗಳೂರು (ಮಾ.12): ರಾಜ್ಯದಲ್ಲಿ ಮತ್ತೆ ಮೋದಿ ಸುನಾಮಿ ಶುರುವಾಗುತ್ತಿದೆ. ಇದಕ್ಕೆ ಕಾರಣ ಬರೀ ರೋಡ್ ಷೋ ಒಂದೇ ಅಲ್ಲ.. ಬರೋಬ್ಬರಿ, 16 ಸಾವಿರ ಕೋಟಿ ರೂ. ಮೌಲ್ಯದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಮೋದಿ ಮಾಡುತ್ತಿದ್ದಾರೆ.
ಅದರಿಂದ ರಾಜ್ಯಕ್ಕಾಗೋ ಲಾಭವೇನು ಗೊತ್ತಾ..? ಮೈಸೂರಿಂದ ಹುಬ್ಬಳ್ಳಿ ತನಕ ಸೆನ್ಸೇಷನ್ ಸೃಷ್ಟಿಸಿರೋ ಮೋದಿ ಹವಾ ಎಷ್ಟೆಲ್ಲಾ ಸೆಲೆಬ್ರೇಷನ್ಗೆ ಕಾರಣವಾಗಿದೆ ಗೊತ್ತಾ..? ಅಂದ ಹಾಗೆ, ರಾಜ್ಯಕ್ಕೆ ಬರೋ ಮೋದಿ ಈ ಸಲ ಏನೇನು ಮಾಡ್ತಾರೆ.. ಅದಕ್ಕಿಂತಾ ಮುಖ್ಯವಾಗಿ. ಸಿಎಮ್ ಬೊಮ್ಮಾಯಿ ಅವರು, ವಿಜಯಯಾತ್ರೆಲಿ ಬ್ಯುಸಿಯಾಗಿದ್ದಾಗಲೇ, ಪಿಎಮ್ ಫೋನ್ ಮಾಡಿದ್ರಂತಲ್ಲಾ, ಅಲ್ಲೇನೇನು ಮಾತುಕತೆ ನಡೆಸಿದ್ರು..? ಯಾವ ರಹಸ್ಯ ತಿಳಿಸಿದ್ರು..? ಅದೆಲ್ಲವನ್ನೂ ಹೇಳೋದೆ ಇವತ್ತಿನ ಸುವರ್ಣ ಫೋಕಸ್, ಮತ್ತೆ ಶುರು ಮೋದಿ ಹವಾ!
ಪ್ರಧಾನಿ ಮೋದಿ ಬರ್ತಿದ್ದಾರೆ ಅಂದ್ರೆ, ಅಲ್ಲೊಂದು ಸಂಭ್ರಮ ಸಡಗರದ ವಾತಾವರಣ ತಾನೇ ತಾನಾಗಿ ನಿರ್ಮಾಣವಾಗಿರುತ್ತೆ.. ಇದರಿಂದ ಬಿಜೆಪಿ ಲಾಭ ಮಾಡಿಕೊಳ್ಳೋಕೆ ತಯಾರಿಯೂ ಆಗಿರುತ್ತೆ.. ಆದ್ರೆ ಈ ಸಲ ಮೋದಿ ಹವಾ ಎಂಥಾ ಮ್ಯಾಜಿಕ್ ಮಾಡಲಿದೆ..? ಪ್ರಧಾನಿಗಳ ಈ ಆಗಮನ, ರಾಜ್ಯದಲ್ಲಿ ಹೊಸ ರಾಜಕೀಯ ಲೆಕ್ಕಾಚಾರ ಸೃಷ್ಟಿಗೆ ನಾಂದಿ ಹಾಡಿದೆ.. ಅದ್ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.