ಐಎಂಎ ಗ್ರಾಹಕರಿಗೆ ಸಿಹಿಸುದ್ದಿ: 60 ಕೋಟಿ ಅಧಿಕ ಮೌಲ್ಯದ ಜುವೆಲ್ಲರಿ ಇ-ಹರಾಜು

Feb 5, 2023, 1:33 PM IST

ಬೆಂಗಳೂರು (ಫೆ.05): ಐಎಂಎ ಜುವೆಲ್ಲರಿ ಮಳಿಗೆಗಳಿಂದ ಜಪ್ತಿ ಮಾಡಿಕೊಳ್ಳಲಾಗಿರುವ ಚಿನ್ನಾಭರಣಗಳ ಪ್ರದರ್ಶನ ಇಂದು ಕೊನೆಗೊಳ್ಳಲಿದ್ದು, ನಾಳೆಯಿಂದ ಆನ್‌ಲೈನ್‌ ಮೂಲಕ ಆಭರಣಗಳ ಹರಾಜು ಪ್ರಕ್ರಿಯೆ ಆರಂಭ ಮಾಡಲಾಗುತ್ತಿದೆ.  ವಜ್ರ, ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನಂ ಸೇರಿ ಹಲವು ಆಭರಣಗಳನ್ನು ಹರಾಜು ಮಾಡಲಾಗುತ್ತಿದೆ.

ದೇಶದ ಪ್ರತಿಷ್ಠಿತ ೯ ಜುವೆಲ್ಲರಿ ಕಂಪನಿಗಳು ಈ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿವೆ. ಐಎಂಎ ಜುವೆಲ್ಲರಿ ಮಳಿಗೆಗಳಿಂದ ಜಪ್ತಿ ಮಾಡಿಕೊಳ್ಳಲಾದ ಆಭರಣಗಳನ್ನು ಮಾರಾಟ ಮಾಡಲಾಗುತ್ತಿದೆ. ಗುಣಮಟ್ಟ ಪರೀಕ್ಷೆಯ ಸಾಧನಗಳನ್ನು ಇಟ್ಟು ಸ್ಥಳದಲ್ಲಿಯೇ ಪರೀಕ್ಷೆ ಮಾಡಿಕೊಂಡು ಖರೀದಿ ಮಾಡಬಹುದು. ಕಳೆದ ಮೂರು ದಿನಗಳಿಂದ ಎಲ್ಲ ಆಭರಣಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಹಲವು ಜನರು ಕೂಡ ವೀಕ್ಷಣೆ ಮಾಡಿದ್ದರು. ನಾಳೆ ಸೆಬಿ ಸಿ-ಇನ್‌ ಇ-ಪೋರ್ಟಲ್‌ ಮೂಲಕ ಹರಾಜು ಪ್ರಕ್ರಿಯೆ ಆರಂಭ ಆಗಲಿದೆ. ಈ ಹರಾಜು ಪ್ರಕ್ರಿಯೆಯಿಂದ ಬಂದ ಹಣವನ್ನು ಐಎಂಎ ಪ್ರಕರಣದಲ್ಲಿ ವಂಚನೆಗೊಳಗಾದ ಗ್ರಾಹಕರಿಗೆ ಹಂಚಿಕೆ ಮಾಡಲಾಗುತ್ತದೆ.