Dec 18, 2024, 5:14 PM IST
ಅಕ್ರಮವಾಗಿ ಶಾಲಾ ಮಕ್ಕಳ ಕ್ಷೀರ ಭಾಗ್ಯದ ಹಾಲಿನ ಪುಡಿಯನ್ನು (Milk Powder) ಸಂಗ್ರಹಿಸಿ ಮಹಾರಾಷ್ಟ್ರಕ್ಕೆ (Maharashtra) ಸಾಗಿಸಲು ಯತ್ನಿಸುತ್ತಿದ್ದಾಗ ಖದೀಮರು ಸಿಕ್ಕಿಬಿದ್ದಿದ್ದಾರೆ. ಬಾಗಲಕೋಟೆಯಲ್ಲಿ CEN ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ತನಿಖೆ ವೇಳೆ ಆರೋಪಿ ಸತ್ಯ ಬಾಯಿ ಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ಆತಂಕ ಶುರುವಾಗಿದೆ. 127 ಸರ್ಕಾರಿ ಶಾಲೆಗಳಿಗೆ CEN ಪೊಲೀಸರು ನೋಟಿಸ್ ಕಳುಹಿಸಿದ್ದಾರೆ.
ಶ್ರೀಶೈಲದಿಂ ಸಬ್ ಲೀಜ್ ಪಡೆದು ಸಿದ್ದಪ್ಪನಿಂದ ಗೋಲ್ಮಾಲ್ ನಡೆಸಿದ್ದು, ಅ.4ರಂದು ಸೂಳಿಕೇರಿ ಗ್ರಾಮದಲ್ಲಿ ನಡೆದಿದ್ದ CEN ಪೋಲಿಸರ ದಾಳಿ
ಆರೋಪಿ ಸಿದ್ದಪ್ಪ ಸೇರಿ ಮೂವರ ವಿರುದ್ಧ FIR ದಾಖಲು ಮಾಡಲಾಗಿದೆ.
ರಾತ್ರಿ ಹಾಲಿನ ಪೌಡರ್, ರಾಗಿ ಹಿಟ್ಟು, ಅಡುಗೆ ಎಣ್ಣೆ ಸಾಗಿಸಲು ಪ್ಲಾನ್ ನಡೆದಿತ್ತು. ಈಗ ಗೂಡ್ಸ್ ವಾಹನ ಸಹಿತ ಸಿದ್ದಪ್ಪನ ಹೆಡೆಮುರಿ ಕಟ್ಟಿದ್ದ ಪೊಲೀಸರಿಗೆ 127 ಶಾಲೆಗಳಿಂದ ಕ್ಷೀರಭಾಗ್ಯ ಹಾಲಿನ ಪೌಡರ್ ಪಡೆದಿರುವುದಾಗಿ ಹೇಳಿಕೆ ನೀಡಿದ್ದಾನೆ.
ಈ ಹಿನ್ನೆಲೆಯಲ್ಲಿ ಹುನಗುಂದ, ಬಾದಾಮಿ, ಬೀಳಗಿ ತಾಲೂಕಿನ ಶಾಲೆಗಳಿಗೆ ನೋಟಿಸ್ ನೀಡಲಾಗಿದೆ. ನೋಟಿಸ್ ಜಾರಿ ಹಿನ್ನಲೆ ಈಗಾಗಲೇ ವಿಚಾರಣೆಗೆ 27 ಜನರು ಹಾಜರಾಗಿದ್ದು, ಒಂದು ನೂರಕ್ಕೂ ಅಧಿಕ ಶಾಲೆಗಳಿಂದ ಇನ್ನು ವಿಚಾರಣೆ ಹಾಜರಾಗಿಲ್ಲ.
ಒಂದು ಶಾಲೆಗೆ 25 ಪ್ಯಾಕೇಟ್ ಪೈಕಿ 15 ಪ್ಯಾಕೇಟ್ ನೀಡುತ್ತಿದ್ದ ಸಿದ್ದಪ್ಪ. 10 ಪಾಕೆಟ್ಗಳಿಗೆ 100 ರೂ. ನೀಡಿ ಪಡೆಯುತ್ತಿದ್ದೆ ಎಂದಿರೋ ಆರೋಪಿ. ಒಟ್ಟು 4,475 ಕೆಜಿ ಹಾಲಿ ಪೌಡರ್ ಸಂಗ್ರಹಿಸಿದ್ದ ಆರೋಪಿ ಸಿದ್ದಪ್ಪ. ಒಟ್ಟು 18 ಲಕ್ಷ ಪದಾರ್ಥ ವಶಕ್ಕೆ ಪಡೆದ ಸಿಇಎನ್ ಠಾಣೆ ಪೊಲೀಸರು. ಬಾಗಲಕೋಟೆ ಸಿಇಎನ್ ಠಾಣೆ ಪೋಲಿಸರಿಂದ ತನಿಖೆ ಮುಂದುವರೆದಿದೆ.