Dec 21, 2024, 7:31 PM IST
ಮಂಗಳೂರು (ಡಿ.21): ನಗರದಲ್ಲಿ ಇಂದಿನಿಂದ ಹೆಲಿಟೂರಿಸಂಗೆ ಚಾಲನೆ ದೊರಕಿದೆ. ಇಂದಿನಿಂದ 9 ದಿನಗಳ ಕಾಲ ಇರುವ ಈ ಹೆಲಿ ಟೂರಿಸಂ ನಗರದ ಸೌಂದರ್ಯವನ್ನು ಬಾನಂಗಳದಿಂದ ನೋಡುವ ಅವಕಾಶವನ್ನು ಒದಗಿಸುತ್ತಿದೆ. ತುಂಬಿ ಏರ್ ಟ್ಯಾಕ್ಸ್ ಕಂಪೆನಿಯ ಸಹಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ಹೆಲಿಟೂರಿಸಂ ಅನ್ನು ಆಯೋಜಿಸಿದೆ. ಪ್ರತಿಯೊಬ್ಬರಿಗೆ ತಲಾ 4,500 ರೂ.ಗೆ 6 ರಿಂದ 7 ನಿಮಿಷಗಳ ಹೆಲಿಕಾಪ್ಟರ್ ಪ್ರಯಾಣ ಅನುಭವ ಸಿಗಲಿದೆ. ತುಂಬಿ ಏರ್ ಟ್ಯಾಕ್ಸ್ ಕಂಪನಿ ಸಹಯೋಗದೊಂದಿಗೆ ದ.ಕ ಜಿಲ್ಲಾಡಳಿತ ಅಯೋಜನೆ ಮಾಡಲಾಗಿದ್ದು, ಮಂಗಳೂರಿನ ಪಣಂಬೂರು, ಕೊಟ್ಟಾರ, ಲಾಲ್ ಭಾಗ್, ನೇತ್ರಾವತಿ ನದಿ ಹಾಗೂ ಸಮುದ್ರ ತೀರದಲ್ಲಿ ರೌಂಡ್ಸ್ ನಡೆಯಲಿದೆ. Www.helitaxii.com ಮೂಲಕವೂ ಆನ್ ಲೈನ್ ಬುಕ್ಕಿಂಗ್ ಗೆ ಅವಕಾಶ ಮಾಡಿಕೊಡಲಾಗಿದ್ದು, ಪ್ರತೀ ಟ್ರಿಪ್ ನಲ್ಲಿ ಅರು ಜನರ ಪ್ರಯಾಣಕ್ಕೆ ಅವಕಾಶ ಕೊಡಲಾಗಿದೆ. ಈ ಬಾರಿ ಹೆಲಿ ಟೂರಿಸಂ ಯಶಸ್ಸಿಯಾದ್ರೆ ಮುಂದೆ ಧಾರ್ಮಿಕ ಕೇಂದ್ರಗಳಾದ ಧರ್ಮಸ್ಥಳ, ಸುಬ್ರಹ್ಮಣ್ಯ, ಕೊಲ್ಲೂರು ಭಾಗಕ್ಕೆ ಮಂಗಳೂರಿನಿಂದ ಟೂರಿಸಂಗೆ ಚಿಂತನೆ ಮಾಡಬಹುದು ಎಂದು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.