ಗಣೇಶೋತ್ಸವಕ್ಕೆ ಅನುಮತಿ ಕೊಡದಿದ್ರೆ ಜೀವನ ಸಾಗಿಸುವುದೇ ಕಷ್ಟ. 3 ವರ್ಷಗಳಿಂದ ವ್ಯಾಪಾರವಿಲ್ಲದೇ ಕಂಗಾಲಾಗಿದ್ದೇವೆ. ಈ ಬಾರಿಯಾದ್ರೂ ನಿಯಮಗಳೊಂದಿಗೆ ಗಣೇಶೋತ್ಸವಕ್ಕೆ ಅನುಮತಿ ಕೊಡಿ: ವರ್ತಕರ ಅಳಲು
ಬೆಂಗಳೂರು (ಸೆ. 05): 'ಗಣೇಶೋತ್ಸವಕ್ಕೆ ಅನುಮತಿ ಕೊಡದಿದ್ರೆ ಜೀವನ ಸಾಗಿಸುವುದೇ ಕಷ್ಟ. 3 ವರ್ಷಗಳಿಂದ ವ್ಯಾಪಾರವಿಲ್ಲದೇ ಕಂಗಾಲಾಗಿದ್ದೇವೆ. ಈ ಬಾರಿಯಾದ್ರೂ ನಿಯಮಗಳೊಂದಿಗೆ ಗಣೇಶೋತ್ಸವಕ್ಕೆ ಅನುಮತಿ ಕೊಡಿ. ಒಂದು ವೇಳೆ ಗಣೇಶೋತ್ಸವಕ್ಕೆ ಬ್ರೇಕ್ ಹಾಕಿದರೆ ನಾವು ಜೀವನ ಸಾಗಿಸುವುದೇ ಕಷ್ಟ ಸ್ವಾಮಿ' ಎಂದು ಮೂರ್ತಿ ತಯಾರಕರು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಅಳಲು ತೋಡಿಕೊಂಡಿದ್ದಾರೆ.
'ಕೋವಿಡ್ 19 ಆತಂಕ ಇರುವುದರಿಂದ ನಮಗೂ ಅರ್ಥವಾಗುತ್ತಿದೆ. ಆದರೆ ಮುಂಜಾಗ್ರತಾ ಕ್ರಮಗಳೊಂದಿಗೆ ಗಣೇಶ ಹಬ್ಬ ಆಚರಣೆಗೆ ಅವಕಾಶ ಮಾಡಿಕೊಡಬೇಕೆಂದು' ಮನವಿ ಮಾಡಿದ್ದಾರೆ.