ಮೀನುಗಾರರ ಕಷ್ಟದ ಬಗ್ಗೆ ಮಾತಾಡಿದ ಹುಚ್ಚ ವೆಂಕಟ್; ನಾವ್ ಹೇಳೋದಕ್ಕಿಂತ ಅವರ ಬಾಯಲ್ಲೇ ಕೇಳಿ.!

Jun 3, 2020, 4:07 PM IST

ಮಂಗಳೂರು (ಜೂ. 03): ಹುಚ್ಚ ವೆಂಕಟ್ ಚಿತ್ರ- ವಿಚಿತ್ರ ಕಾರಣಗಳಿಗಾಗಿ ಸುದ್ದಿಯಾಗುತ್ತಿರುತ್ತಾರೆ. ಇದನ್ನು ಪ್ರಚಾರದ ಹುಚ್ಚಾ ಅಥವಾ ನಿಜವಾದ ಕಾಳಜಿ, ಕಳಕಳಿಯ ಅರ್ಥವಾಗುವುದಿಲ್ಲ. ಇದೀಗ ಹುಚ್ಚ ವೆಂಕಟ್ ಮೀನುಗಾರರ ಸಂಕಷ್ಟದ ಬಗ್ಗೆ ಮಾತನಾಡಿದ್ದಾರೆ. ಇವರು ಮಂಗಳೂರಿಗೆ ಭೇಟಿ ನೀಡಿದ್ದು, ಅಲ್ಲಿ ಮೀನುಗಾರರ ಕಷ್ಟದ ಬಗ್ಗೆ ಮಾತನಾಡಿದ್ದಾರೆ. 'ಸಮುದ್ರಕ್ಕೆ ಹೋಗಿ ಮೀನು ಹಿಡಿಯುವುದು ತುಂಬಾನೇ ಕಷ್ಟ. ಅವರ ಜೀವಕ್ಕೆ ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಹೊಣೆ? ಆದರೂ ಹೊಟ್ಟೆಪಾಡಿಗಾಗಿ ಮಾಡುತ್ತಾರೆ. ನಾವು ದುಡ್ಡು ಕೊಟ್ಟು ಕೊಳ್ಳುತ್ತೇವೆ. ಅವರ ಕಷ್ಟ ನಮಗರ್ಥವಾಗುವುದಿಲ್ಲ. ಸಂಬಂಧಪಟ್ಟವರು ದಯವಿಟ್ಟು ಗಮನಹರಿಸಿ' ಎಂದು ಮನವಿ ಮಾಡಿಕೊಂಡಿದ್ದಾರೆ. 

ಲಾಕ್‌ಡೌನ್‌ ಎಫೆಕ್ಟ್‌: ಬಡವರ ನೋವಿಗೆ ಮಿಡಿದ ಹುಚ್ಚ ವೆಂಕಟ್‌, ದಿನಸಿ ಕಿಟ್‌ ವಿತರಣೆ