: ಆಗ ಲಾರಿ ಚಾಲಕನಾಗಿದ್ದ (Lorry Driver) ವಾಸಿಂ ಪಠಾಣ್ (Wasim Pathan) ಆಜಾನ್ ಉದ್ಘೋಷಕ! ವಸೀಂ ಪಠಾಣ್ ಲಾರಿ ಚಾಲಕನಾಗಿದ್ದ.
ಬೆಂಗಳೂರು (ಏ. 22): ಆಗ ಲಾರಿ ಚಾಲಕನಾಗಿದ್ದ (Lorry Driver) ವಾಸಿಂ ಪಠಾಣ್ (Wasim Pathan) ಆಜಾನ್ ಉದ್ಘೋಷಕ! ವಸೀಂ ಪಠಾಣ್ ಲಾರಿ ಚಾಲಕನಾಗಿದ್ದ. ಇತ್ತೀಚೆಗೆ ಆ ಕೆಲಸ ಬಿಟ್ಟಿದ್ದ. ಹುಬ್ಬಳ್ಳಿಯ ಮಿಲ್ಲತ್ ನಗರದಲ್ಲಿ ಈತನ ಮನೆಯಿದ್ದು, ಅಲ್ಲೇ ಒಂದು ಕಚೇರಿ ಕೂಡ ಇಟ್ಟುಕೊಂಡಿದ್ದ. ವೇಷಭೂಷಣವೆಲ್ಲ ಮೌಲ್ವಿ ರೀತಿಯೇ ಇದ್ದ ಕಾರಣ ಈತನನ್ನು ಬಹುತೇಕರು ಮೌಲ್ವಿ ಎಂದೇ ಭಾವಿಸಿದ್ದರು. ಆದರೆ ಈತ ಮಸೀದಿಯಲ್ಲಿ ಆಜಾನ್ ಕೂಗುತ್ತಿದ್ದ ಎಂದು ತಿಳಿದು ಬಂದಿದೆ.
ಮುಸ್ಲಿಂ ಧರ್ಮಕ್ಕೆ ಎಲ್ಲೇ ಅವಮಾನವಾದರೂ ಅದರ ಬಗ್ಗೆ ಪೂರ್ಣ ಮಾಹಿತಿ ಪಡೆಯುತ್ತಿದ್ದ. ಜತೆಗೆ ತನ್ನದೇ ಯುವಕರ ಗುಂಪು ಕಟ್ಟಿಕೊಂಡು ಇದರ ವಿರುದ್ಧ ಪ್ರತಿಭಟನೆ ಮಾಡಬೇಕು ಎಂದು ಹುರಿದುಂಬಿಸುತ್ತಿದ್ದನಂತೆ. ಬೇರೆ ಬೇರೆ ಸಂಘಟನೆಗಳೊಂದಿಗೆ ಈತ ಸಂಪರ್ಕ ಇಟ್ಟುಕೊಂಡಿದ್ದ ಎಂದು ಹೇಳಲಾಗಿದ್ದು, ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.