ಇಂದು ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಬೆಳಗಾವಿ ಮಹಾನಗರ ಪಾಲಿಕೆಗೆ ಮತದಾನ ನಡೆಯಲಿದೆ. ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ.
ಬೆಂಗಳೂರು (ಸೆ. 03): ಇಂದು ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಬೆಳಗಾವಿ ಮಹಾನಗರ ಪಾಲಿಕೆಗೆ ಮತದಾನ ನಡೆಯಲಿದೆ. ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ.
ಬರೋಬ್ಬರಿ 29 ತಿಂಗಳ ನಂತರ ಹುಬ್ಬಳ್ಳಿ-ಧಾರವಾಡ ಪಾಲಿಕೆಗೆ ಚುನಾವಣೆ ನಡೆಯುತ್ತಿದೆ. ಕಳೆದ ಎರಡು ಬಾರಿಯೂ ಅಧಿಕಾರ ನಡೆಸಿರುವ ಬಿಜೆಪಿಗೆ ಹ್ಯಾಟ್ರಿಕ್ ಗೆಲುವಿನ ಕನಸು ಬಿದ್ದಿದೆ. ಆದರೆ ಕಾಂಗ್ರೆಸ್ ಹೋರಾಟಕ್ಕಿಳಿದಿದೆ. ಕಾಂಗ್ರೆಸ್ 82, ಬಿಜೆಪಿ 82, ಜೆಡಿಎಸ್ 42, ಆಪ್ 41 ಸ್ಥಾನಗಳಲ್ಲಿ ಸ್ಪರ್ಧಿಸಿವೆ. ಮುಸ್ಲಿಂ ಬಾಹುಳ್ಯವಿರುವ 12 ವಾರ್ಡ್‌ಗಳಲ್ಲಿ ಎಂಐಎಂ ಸ್ಪರ್ಧಿಸಿದೆ. ಸೆಪ್ಟೆಂಬರ್ 6 ಕ್ಕೆ ಫಲಿತಾಂಶ ಹೊರ ಬೀಳಲಿದೆ.