ಸಂತ್ರಸ್ತೆಯ ಮೆಡಿಕಲ್ ಟೆಸ್ಟ್ ಯಾವ ರೀತಿ ನಡೆಯುತ್ತದೆ.? ಗೈನಕಾಲಜಿಸ್ಟ್ ವಿವರಣೆ

Mar 31, 2021, 3:17 PM IST

ಬೆಂಗಳೂರು (ಮಾ. 31): ಅತ್ಯಾಚಾರ ಸಂತ್ರಸ್ತೆಯನ್ನು ಮೆಡಿಕಲ್‌ ಟೆಸ್ಟ್‌ಗೆ ಒಳಪಡಿಸಿದಾಗ ಯಾವ ರೀತಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಸ್ತ್ರಿರೋಗ ತಜ್ಞೆ ಡಾ. ವಿದ್ಯಾ ಭಟ್ ವಿವರಿಸಿದ್ದಾರೆ. 

'ಸಂತ್ರಸ್ತೆಯ ಮೈ ಮೇಲೆ ಗಾಯಗಳೆನಾದ್ರೂ ಆಗಿದ್ಯಾ..? ಅದೇ ಬಟ್ಟೆಯಲ್ಲಿ ಬಂದಿದ್ದರೆ ಕೂದಲು, ವೀರ್ಯ, ಉಗುರೇನಾದ್ರೂ ಇದೆಯಾ ಎಂದು ಪರೀಕ್ಷಿಸಲಾಗುತ್ತದೆ. ಆ ನಂತರ ಜನನಾಂಗ ಪರೀಕ್ಷೆ ಮಾಡಲಾಗುತ್ತದೆ. ಸ್ವ್ಯಾಬ್ ತೆಗೆದುಕೊಳ್ಳಲಾಗುತ್ತದೆ. 28 ದಿನಗಳಾಗಿರುವುದರಿಂದ ಕಂಡು ಹಿಡಿಯುವುದು ಕಷ್ಟವಾಗುತ್ತದೆ' ಎಂದಿದ್ದಾರೆ.