ಹಿಜಾಬ್‌ ಇಲ್ಲದಿದ್ದರೆ ರೇಪ್‌ ಹೆಚ್ಚುತ್ತವೆ ಎಂದಿದ್ದ ಶಾಸಕ ಜಮೀರ್ ಕ್ಷಮೆಯಾಚನೆ ಹಿಂದಿದೆ ಈ ಸೀಕ್ರೆಟ್!

ಹಿಜಾಬ್‌ ಇಲ್ಲದಿದ್ದರೆ ರೇಪ್‌ ಹೆಚ್ಚುತ್ತವೆ ಎಂದಿದ್ದ ಶಾಸಕ ಜಮೀರ್ ಕ್ಷಮೆಯಾಚನೆ ಹಿಂದಿದೆ ಈ ಸೀಕ್ರೆಟ್!

Published : Feb 16, 2022, 04:38 PM ISTUpdated : Feb 16, 2022, 05:10 PM IST

ಹಿಜಾಬ್‌, ಬುರ್ಖಾ ಧರಿಸದಿದ್ದರೆ ಅತ್ಯಾಚಾರಗಳು (Rape) ಹೆಚ್ಚಾಗುತ್ತವೆ ಎಂಬರ್ಥದ  ಹೇಳಿಕೆಯನ್ನು ಶಾಸಕ ಜಮೀರ್‌ ಖಾನ್ (Zameer Khan)ಇತ್ತೀಚಿಗೆ ಹೇಳಿದ್ದರು. ಈ ಹೇಳಿಕೆ ವಿರುದ್ಧ ಬಿಜೆಪಿ ನಾಯಕರು ಸರಣಿಯಾಗಿ ಕಿಡಿಕಾರಿದ್ದರು. 

ಬೆಂಗಳೂರು (ಫೆ. 16): ಹಿಜಾಬ್‌, ಬುರ್ಖಾ ಧರಿಸದಿದ್ದರೆ ಅತ್ಯಾಚಾರಗಳು (Rape) ಹೆಚ್ಚಾಗುತ್ತವೆ ಎಂಬರ್ಥದ  ಹೇಳಿಕೆಯನ್ನು ಶಾಸಕ ಜಮೀರ್‌ ಖಾನ್ (Zameer Khan)ಇತ್ತೀಚಿಗೆ ಹೇಳಿದ್ದರು. ಈ ಹೇಳಿಕೆ ವಿರುದ್ಧ ಬಿಜೆಪಿ ನಾಯಕರು ಸರಣಿಯಾಗಿ ಕಿಡಿಕಾರಿದ್ದರು. ಜೊತೆಗೆ ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar), ಜಮೀರ್‌ ಅಹಮದ್‌ಖಾನ್‌ ಹೇಳಿಕೆ ಹಿಂಪಡೆದು ಜನರ ಕ್ಷಮೆ ಕೋರಬೇಕು ಎಂದು ಬಹಿರಂಗವಾಗಿ ತಾಕೀತು ಮಾಡಿದ್ದರು. ಆದರೆ, ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ತಿರುಗೇಟು ನೀಡಿದ ಜಮೀರ್‌ ಅಹಮದ್‌ ಖಾನ್‌, ‘ನಾನು ಕ್ಷಮೆ ಕೋರಲ್ಲ, ಕ್ಷಮೆ ಕೋರಲು ನಾನೇನು ತಪ್ಪು ಹೇಳಿಕೆ ನೀಡಿದ್ದೇನೆ?’ ಎಂದು ಖಾರವಾಗಿ ಪ್ರಶ್ನಿಸಿದ್ದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಜಮೀರ್‌ಗೆ ನೇರವಾಗಿ ದೂರವಾಣಿ ಕರೆ ಮಾಡಿ ಈ ವಿಚಾರದಲ್ಲಿ ಕ್ಷಮೆ ಕೋರದಿದ್ದರೆ ಪಕ್ಷಕ್ಕೆ ಹಾನಿಯಾಗುತ್ತದೆ. ಇದು ಅಶಿಸ್ತು ಹೀಗಾಗಿ ಕ್ಷಮೆ ಕೋರಲೇ ಬೇಕು ಎಂದು ತಾಕೀತು ಮಾಡಿದರು ಎನ್ನಲಾಗಿದೆ. ತಕ್ಷಣ ಜಮೀರ್‌, ಯಾರ ಮನಸ್ಸನ್ನೂ ನೋಯಿಸುವ ಅಥವಾ ಅಗೌರವ ತೋರಿಸುವ ದುರುದ್ದೇಶದಿಂದ ನಾನು ಆ ರೀತಿ ಹೇಳಿಲ್ಲ. ಹೆಣ್ಣು ಮಕ್ಕಳ ಕಾಳಜಿಯ ಸದುದ್ದೇಶದಿಂದ ಹೇಳಿರುವ ನನ್ನ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ ಎಂದು ಹೇಳಿದ್ದಾರೆ.


 

27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
24:25ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ 'ಕಾಮಲೀಲೆ' ಭಾಗ-2: ಬಗೆದಷ್ಟು ಬಯಲಾಗ್ತಿದೆ ‘ಪೋಲಿ’ಸ್ ಮಾಮನ ಲೀಲೆ
24:18ಗಂಡನ ಮೇಲೆ ಕೇಸ್ ಹಾಕಿ ಹೆಂಡತಿಯರನ್ನ ಮಂಚಕ್ಕೆ ಕರೆಯೋ ಇನ್ಸ್‌ಪೆಕ್ಟರ್ ಸಂದೇಶ್; ಖಾಕಿ ಕಾಮಕಾಂಡ ಬಟಾಬಯಲು
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
Read more