ಶಿಲ್ಪಾನಾಗ್ ವಿರುದ್ಧ ರೋಹಿಣಿ ಸಿಂಧೂರಿ ಮುನಿಸು ಇನ್ನೂ ಶಮನವಾಗಿಲ್ಲ. 'ಯಾವ ಕಾರಣಕ್ಕೆ ವರ್ಗಾವಣೆ ಆಗಿದೀವಿ ಅಂತ ನಮಗೆ ಗೊತ್ತಿಲ್ಲ. ಎಲ್ಲಾ ವಿಚಾರವೂ ಜನರ ಮುಂದಿದೆ. ಅವರೇ ತೀರ್ಮಾನ ಮಾಡಲಿ' ಎಂದಿದ್ಧಾರೆ.
ಬೆಂಗಳೂರು (ಜೂ. 07): ಶಿಲ್ಪಾನಾಗ್ ವಿರುದ್ಧ ಮುನಿಸು ಇನ್ನೂ ಶಮನವಾಗಿಲ್ಲ. 'ಯಾವ ಕಾರಣಕ್ಕೆ ವರ್ಗಾವಣೆ ಆಗಿದೀವಿ ಅಂತ ನಮಗೆ ಗೊತ್ತಿಲ್ಲ. ಎಲ್ಲಾ ವಿಚಾರವೂ ಜನರ ಮುಂದಿದೆ. ಅವರೇ ತೀರ್ಮಾನ ಮಾಡಲಿ. ಇಡೀ ರಾಜ್ಯದಲ್ಲಿ ನಮ್ಮ ಜಿಲ್ಲೆಯಲ್ಲಿ ಅತೀ ಹೆಚ್ಚು ಲಸಿಕೆ ಅಭಿಯಾನ ನಡೆದಿದೆ. ಕೊರೋನಾ ತಡೆಗಟ್ಟುವಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದೇವೆ' ಎಂದು ರೋಹಿಣಿ ಸಿಂಧೂರಿ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.
'ಕೋವಿಡ್ ವೇಳೆ ಈ ಹೈಡ್ರಾಮಾ ಬೇಕಿತ್ತಾ..? ಬಹಳ ಹತಾಶೆಯಿಂದ ಮಾತನಾಡಿದ್ದಾರೆ. ಶಿಲ್ಪಾನಾಗ್ ಅವರ ಹತಾಶೆ, ಇನ್‌ಸೆಕ್ಯುರಿಟಿ ನೋಡಿ ಅನುಕಂಪ ಬರುತ್ತೆ' ಎಂದಿದ್ಧಾರೆ.