Sep 24, 2021, 2:41 PM IST
ಬೆಂಗಳೂರು(ಸೆ.24): ಶಾಂತವಾಗಿರುವ ಕರ್ನಾಟಕದಲ್ಲಿ ರಕ್ತಪಾತಕ್ಕೆ ಉಗ್ರರು ಸ್ಕೆಚ್ ಹಾಕಿದ್ದಾರೆ. ಪ್ಲಾಸ್ಟಿಕ್ ಲಂಚ್ ಬಾಕ್ಸ್ ಆಕಾರದಲ್ಲಿ ಐಇಡಿ(IED) ತುಂಬಿ ಬ್ಲಾಸ್ಟ್ ಮಾಡಲು ಉಗ್ರರು ಪ್ಲ್ಯಾನ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಬ್ಬದ ಸಂದರ್ಭವನ್ನೇ ಬಳಸಿ ಬಾಂಬ್ ದಾಳಿಗೆ ಐಸಿಸಿ ಉಗ್ರರು ಸಂಚು ರೂಪಿಸಿದ್ದಾರೆ. ರಾಜ್ಯದ ಕರಾವಳಿ ಪ್ರದೇಶವೇ ಉಗ್ರ ದಾಳಿಯ ಹಾಟ್‌ಸ್ಪಾಟ್ ಆಗಿದೆ. ಹೀಗಾಗಿ ಕಡಲತಡಿಯಲ್ಲಿ ಹೈಅಲರ್ಟ್ ಘೋಷಿಸುವಂತೆ ಕೇಂದ್ರ ರಾಜ್ಯಕ್ಕೆ ಸೂಚನೆ ನೀಡಿದೆ. ಕೇಂದ್ರದ ಗುಪ್ತಚರ ಇಲಾಖೆ ಏಜನ್ಸಿಗಳಿಂದ ಉಗ್ರ ದಾಳಿಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ಕಡಲ ತಡಿ, ದಟ್ಟಾರಣ್ಯ, ಪರ್ವತ ಪ್ರದೇಶಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಬೆಲೆ ಏರಿಕೆಗೆ ವಿರೋಧ: ಬೊಮ್ಮಾಯಿ ಸರ್ಕಾರ ಕಟ್ಟಿಹಾಕಲು ಕಾಂಗ್ರೆಸ್ ನಿರ್ಧಾರ