ರಾಜ್ಯದಲ್ಲಿ ಇನ್ನೂ 4 ದಿನ ಧಾರಾಕಾರ ಮಳೆ: ಈ ವರ್ಷದ ಮಳೆಗಾಲ ತರಲಿದೆಯಾ ಜನರಿಗೆ ಹರುಷ?

May 12, 2024, 11:35 AM IST

ಬೆಂಗಳೂರು(ಮೇ.12): ರಾಜ್ಯದ ರಾಜಧಾನಿಯಲ್ಲಷ್ಟೇ ಅಲ್ಲ, ರಾಜ್ಯದ ಅನೇಕ ಭಾಗಗಳಲ್ಲಿ ಗುಡುಗು ಸಿಡಿಲಿನ ಸಮೇತ ವರುಣ ದೇವ ಅಬ್ಬರಿಸಿದ್ದಾನೆ. ಈ ಮಳೆಗೆ ಕೆಲವರು ಹಬ್ಬವನ್ನ ಆಚರಿಸಿದ್ರೆ.. ಇನ್ನು ಕೆಲವರು ಕಣ್ಣೀರು ಹಾಕಿದ್ದಾರೆ. 

ಮಳೆ ಆಗ್ತಾ ಇದೆ ಅನ್ನೊ ಸಮಾಧಾನ ಇದೆ. ಈ ಮಳೆ ಹೀಗೆ ಸುರಿದು ಇಳೆಯನ್ನ ಇನ್ನಷ್ಟು ತಂಪು ಮಾಡಲಿ ಅನ್ನೊದೇ ಎಲ್ಲರ ಆಸೆ. ಆದರೆ ಮಳೆರಾಯ ಕೆಲವೊಮ್ಮೆ ಹುಚ್ಚಾಟವನ್ನೂ ಆಡ್ತಾನೆ. ಆ ಆಟಕ್ಕೆ ಅನೇಕರು ಕಣ್ಣೀರು ಸುರಿಸುವಂತಾಗಿದೆ. 

News Hour: ಕೇಸ್‌ ಮಾಡಿದ ಪುತ್ರ ಜರ್ಮನಿಗೆ, ಕಿಡ್ನಾಪ್‌ ಮಾಡಿದ ಅಪ್ಪ ಜೈಲಿಗೆ!

ಕಳೆದ ವರ್ಷ ಮಳೆರಾಯನ ದರ್ಶನ ಸಿಕ್ಕಿದ್ದೇ ಅಪರೂಪ. ಅದರ ಪರಿಣಾಮ ರಾಜ್ಯದ ಅನೇಕ ಅಣೆಕಟ್ಟುಗಳ ಮೇಲೂ ಆಗಿತ್ತು. ನೀರೇ ಇಲ್ಲದೇ ಖಾಲಿಯಾಗಿದ್ದ ಅಣೆಕಟ್ಟಿಗೆ ಈ ಬಾರಿ ವರುಣ ಮರುಜೀವ ಕೊಡ್ತಿದ್ದಾನೆ. ಬೇಸಿಗೆ ಕಾಲ ಬಂದರೆ ಸಾಕು, ಮನುಷ್ಯರಿಗೆ ಹಾಗೂ ಪ್ರಾಣಿಗಳಿಗೆ ಜಲಾಶಯಗಳೇ ಆಸರೆಯಾಗಿರೋದು. ಆದರೆ ಈ ಬಾರಿಯ ಬರಗಾಲ ಜಲಾಶಯದಲ್ಲಿ ನೀರೇ ಇಲ್ಲದಂತೆ ಮಾಡಿತ್ತು. ಈಗ ಇವೇ ಜಲಾಶಯಗಳು ವರುಣದೇವನ ಕೃಪೆಯಿಂದ ಮತ್ತೆ ಮರುಜೀವ ಪಡೆದುಕೊಳ್ತಿದೆ.